ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್ ನ ಪಠಾಣ್ ಸಿನಿಮಾ ಭಾರತದಲ್ಲಿ ವಿವಾದಕ್ಕೆ ತುತ್ತಾದರೆ ವಿದೇಶದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಭರವಸೆ ಸಿಕ್ಕಿದೆ. ಜರ್ಮನ್ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದ್ದು, ಜರ್ಮನ್ ನಲ್ಲಿ ವಾರಂತ್ಯದ ಬಹುತೇಕ ಟಿಕೆಟ್ ಖರೀದಿಯಾಗಿವೆ. ಸಿನಿಮಾ ಬಿಡುಗಡೆಗೆ ಇನ್ನೂ 27 ದಿನಗಳು ಬಾಕಿ ಇದ್ದರೂ ಕ್ರೇಜ್ ಮಾತ್ರ ಬಿಡುಗಡೆಯ ದಿನದಂತೆ ಇದೆ.
Advertisement
‘ಪಠಾಣ್’ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದರೂ ಮತ್ತು ಕೇಸರಿ ಬಣ್ಣಕ್ಕೆ ಅವಮಾನಿಸಲಾಗಿದೆ ಎನ್ನುವ ಕಾರಣಕ್ಕಾಗಿ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಹೋರಾಟ ಮಾಡಲಾಯಿತು. ಅಲ್ಲದೇ ಕೆಲವರು ಬೀದಿಗೆ ಇಳಿದು ಕೂಡ ಪ್ರತಿಭಟನೆ ಮಾಡಿದರು. ಕೆಲ ರಾಜ್ಯಗಳಲ್ಲಿ ಹೋರಾಟ ಇನ್ನೂ ತೀವ್ರವಾಗಿತ್ತು. ಆದರೆ, ವಿದೇಶದಲ್ಲಿ ಇದ್ಯಾವುದೂ ಟೆನ್ಷನ್ ಇಲ್ಲದೇ ಚಿತ್ರ ರಿಲೀಸ್ ಗೆ ರೆಡಿಯಾಗುತ್ತಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ಮಾಡಲು ಲಂಡನ್ಗೆ ಹಾರಿದ ರಮ್ಯಾ- ಅಮೃತಾ
Advertisement
Advertisement
ಈಗಷ್ಟೇ ಪಠಾಣ್ ಸಿನಿಮಾ ಸೆನ್ಸಾರ್ ಅಂಗಳದಲ್ಲಿ ಇತ್ತು. ಕೆಲ ಬದಲಾವಣೆಗಳನ್ನು ಸೂಚಿಸಿರುವ ಕಾರಣದಿಂದಾಗಿ ಇನ್ನೂ ಅದಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ. ಸೆನ್ಸಾರ್ ಮಂಡಳಿಯವರು ಹೇಳಿದ ಬದಲಾವಣೆಗಳನ್ನು ಮಾಡಿ, ಮತ್ತೆ ಸಿನಿಮಾ ತೋರಿಸಬೇಕಿದೆ. ಹೀಗಾಗಿ ಅನೌನ್ಸ್ ಮಾಡಿರುವ ದಿನಾಂಕದಂದು ಸಿನಿಮಾ ರಿಲೀಸ್ ಆಗುತ್ತದಾ ಎನ್ನುವ ಪ್ರಶ್ನೆ ಕೂಡ ಉದ್ಭವಿಸಿದೆ. ಆದರೂ, ವಿದೇಶಗಳಲ್ಲಿ ಚಿತ್ರದ ಟಿಕೆಟ್ ಅನ್ನು ನಿನ್ನೆಯಿಂದಲೇ ಮಾರಾಟ ಮಾಡಲಾಗುತ್ತಿದೆ.
Advertisement