ಬಾದ್‍ ಶಾ ಹುಟ್ಟಹಬ್ಬ ದಿನದಂದು ಎದುರಾದ ವೈರಿಗಳು, ಜೊತೆಯಾದ ಮಾಜಿ ಪ್ರೇಮಿಗಳು!

Public TV
3 Min Read
Shahrukh Khan

ಮುಂಬೈ: ಬಾಲಿವುಡ್ ಬಾದ್‍ ಶಾ ಶಾರೂಖ್ ಖಾನ್ ತಮ್ಮ 52 ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿ 12 ಗಂಟೆಯಿಂದಲೇ ಬಿ-ಟೌನ್ ನ ನಟರು ಅಲಿಬಗ್ ನಲ್ಲಿರುವ ಶಾರೂಖ್ ಫಾರ್ಮ್ ಹೌಸ್ ಗೆ ತೆರಳಿ ಕೇಕ್ ಕತ್ತರಿಸಿ ಶಾರೂಖ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಶಾರೂಖ್ ಹುಟ್ಟುಹಬ್ಬದಂದು ದೀಪಿಕಾ ಪಡುಕೋಣೆ ಬರುತ್ತಿದ್ದಂತೆ ಕತ್ರಿನಾ ಕೈಫ್ ಪಾರ್ಟಿಯನ್ನು ಅರ್ಧದಲ್ಲೇ ಬಿಟ್ಟು ಹೊರ ಹೋಗಿದ್ದಾರೆ. ದೀಪಿಕಾ ಪಡುಕೋಣೆ ಬರುವ ಮುಂಚೆ ಕತ್ರಿನಾ ಅವರು ಶಾರೂಖ್ ಜೊತೆ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು.

ಅಲಿಬಗ್ ನಿಂದ ಹೊರಟ ಕತ್ರಿನಾ ಕೆಲವೇ ಸಮಯದಲ್ಲಿ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದ ಸಲುವಾಗಿ ಕತ್ರಿನಾ ಪಾರ್ಟಿಯನ್ನು ಮಧ್ಯದಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಈಗ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

ಶಾರೂಖ್ ಹುಟ್ಟುಹಬ್ಬದಂದು ದೀಪಿಕಾ ಪಡುಕೋಣೆ ಆಗಮಿಸಿದ್ದು, ಬಾದ್ ಶಾ ಜೊತೆ ಕೆಲ ಸಂತೋಷದ ಕ್ಷಣಗಳನ್ನು ಕಳೆದರು. ಈ ಪಾರ್ಟಿಯಲ್ಲಿ ಮಾಜಿ ಪ್ರೇಮಿಗಳಾದ ಅಲಿಯಾ ಭಟ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪಾರ್ಟಿಯಲ್ಲಿ ಅಲಿಯಾ ಭಟ್ ಹಾಗೂ ದೀಪಿಕಾ ಪಡುಕೋಣೆ ಜೊತೆಯಾಗಿ ಫೋಟೋದಲ್ಲಿ ಪೋಸ್ ಕೊಟ್ಟಿದ್ದಾರೆ.

ಶಾರೂಖ್ ಹುಟ್ಟುಹಬ್ಬದ ದಿನದಂದು ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಮಲೈಕಾ ಆರೋರಾ, ಸೂಸೈನ್ ರೋಶನ್, ಅಲಿಯಾ ಭಟ್, ಕರಣ್ ಜೋಹರ್, ಫರ್ಹ ಖಾನ್, ಫರಾನ್ ಅಕ್ತರ್, ಸೇರಿದಂತೆ ಹಲವು ನಟರು ಭಾಗವಹಿಸಿದ್ದರು.

ಶಾರೂಖ್ ಅವರ ಹುಟ್ಟುಹಬ್ಬದ ಕೆಲವು ಫೋಟೋಗಳನ್ನು ನಿರ್ದೇಶಕ ಕರಣ್ ಜೋಹರ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರು ಶಾರೂಖ್ ಖಾನ್ ಅವರಿಗೆ ಟ್ವಿಟ್ಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.

https://twitter.com/itsSSR/status/925993386586259456

You go girls!!!!! #alibaugdiaries

A post shared by Karan Johar (@karanjohar) on

Happy campers! #alibaugdiaries

A post shared by Karan Johar (@karanjohar) on

Poser alert! @nehadhupia

A post shared by Karan Johar (@karanjohar) on

My fave @malaikaarorakhanofficial

A post shared by Karan Johar (@karanjohar) on

Love you farah!!!!! Watch out for the most talented photo bombers!

A post shared by Karan Johar (@karanjohar) on

Girl zone! #alibaugdiaries @deepikapadukone @aliaabhatt

A post shared by Karan Johar (@karanjohar) on

Photobombed by Abram! Girls just wanna have fun!!!

A post shared by Karan Johar (@karanjohar) on

Eve of the birthday! @iamsrk #alibaugdiaries

A post shared by Karan Johar (@karanjohar) on

happy birthday SR ????????

A post shared by Alia ✨⭐️ (@aliaabhatt) on

Share This Article
Leave a Comment

Leave a Reply

Your email address will not be published. Required fields are marked *