ಇನ್ನಷ್ಟು ಕಾಲ ಕ್ರಿಕೆಟ್ ಆಡಿ ಎಂದು ಧೋನಿಗೆ ಮನವಿ ಮಾಡಿಕೊಂಡ ಪಾಕ್ ಕ್ರಿಕೆಟರ್

Public TV
1 Min Read
Shahnawaz Dahani MS DHONI

ಇಸ್ಲಾಮಾಬಾದ್: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇನ್ನೂ ಕೂಡ ಕ್ರಿಕೆಟ್ ಆಡಲು ಫಿಟ್ ಆಗಿದ್ದು ಇನ್ನಷ್ಟು ಕಾಲ ಕ್ರಿಕೆಟ್ ಆಡಿ ಎಂದು ಧೋನಿ ಅಭಿಮಾನಿ ಪಾಕಿಸ್ತಾನ ತಂಡದ ಆಟಗಾರ ಶಹನವಾಜ್ ದಹಾನಿ ಮನವಿ ಮಾಡಿ ಹುಟ್ಟುಹಬ್ಬದ ಶುಭಕೋರಿದ್ದಾರೆ.

DHONI LONG HAIR

ಧೋನಿ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಗಾಗಿ ಟ್ವಿಟ್ಟರ್ ಮೂಲಕ ಹುಟ್ಟುಹಬ್ಬದ ಶುಭಕೋರಿರುವ ದಹಾನಿ, ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಗ್ರೇಟ್ ಫಿನಿಶರ್, ಸ್ಫೂರ್ತಿ ಮತ್ತು ಮಾದರಿ ಆಟಗಾರರಾದ ಧೋನಿ ಸರ್‌ಗೆ ಹುಟ್ಟುಹಬ್ಬದ ಶುಭಾಶಯ. ಸರ್ ನೀವು ಈಗಲೂ ಕ್ರಿಕೆಟ್ ಆಡಲು ಸಾಕಷ್ಟು ಫಿಟ್ ಆಗಿದ್ದೀರಿ, ಆದ್ದರಿಂದ ದಯವಿಟ್ಟು ಇನ್ನೂ ಕೆಲವು ವರ್ಷಗಳ ಕಾಲ ನಮ್ಮನ್ನು ಕ್ರಿಕೆಟ್ ಆಡುವ ಮೂಲಕ ರಂಜಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಓಂ ಹೆಲಿಕಾಪ್ಟರಾಯ ನಮಃ ಎಂದು ಧೋನಿಗೆ ವಿಶ್ ಮಾಡಿದ ಸೆಹ್ವಾಗ್

ಈ ಹಿಂದೆ ಟಿ20 ವಿಶ್ವಕಪ್ ವೇಳೆ ಧೋನಿಯನ್ನು ಭೇಟಿ ಮಾಡಿದ ದಹಾನಿ ಧೋನಿಯೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದರು. ಶಹನವಾಜ್ ದಹಾನಿ ಪಾಕಿಸ್ತಾನ ತಂಡದಲ್ಲಿದ್ದರೂ ಕೂಡ ಧೋನಿ ಎಂದರೆ ಪಂಚಪ್ರಾಣವೆಂದು ಈ ಹಿಂದೆ ಹೇಳಿಕೊಂಡಿದ್ದರು.

Dhoni Yuvi

ಬಿಸಿಸಿಐ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಾಜಿ ಆಟಗಾರರಾದ ಸುರೇಶ್ ರೈನಾ, ಮೊಹಮ್ಮದ್ ಕೈಫ್ ಸೇರಿದಂತೆ ಹಲವು ದೇಶಗಳ ಮಾಜಿ, ಹಾಲಿ ಆಟಗಾರರು ಟ್ಟಿಟ್ಟರ್ ಮೂಲಕ ಧೋನಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article