Connect with us

ತನ್ನೆದುರೇ ನಟಿಯನ್ನು ತಬ್ಬಿಕೊಂಡ ಪತಿ ಶಾಹಿದ್‍ಗೆ ಕ್ಷಣಾರ್ಧದಲ್ಲಿ ಚಮಕ್ ಕೊಟ್ಟ ಪತ್ನಿ ಮೀರಾ

ತನ್ನೆದುರೇ ನಟಿಯನ್ನು ತಬ್ಬಿಕೊಂಡ ಪತಿ ಶಾಹಿದ್‍ಗೆ ಕ್ಷಣಾರ್ಧದಲ್ಲಿ ಚಮಕ್ ಕೊಟ್ಟ ಪತ್ನಿ ಮೀರಾ

ಮುಂಬೈ: ಫೆಬ್ರವರಿ 1ರಂದು ನಗರದಲ್ಲಿ ಖಾಸಗಿ ಮಾಧ್ಯಮವೊಂದು ಮೋಸ್ಟ್ ಸ್ಟೈಲಿಶ್ ಅವಾರ್ಡ್-2018 ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಪ್ರಶಸ್ತಿ ಸಮಾರಂಭಕ್ಕೆ ಬಾಲಿವುಡ್‍ನ ಎಲ್ಲ ತಾರೆಯರು ಆಗಮಿಸಿ, ಕಲರ್ ಕಲರ್ ಡ್ರೆಸ್ ಗಳಲ್ಲಿ ಮಿಂಚಿದ್ದರು. ಬಾಲಿವುಡ್ ತಾರೆಯರು ತಮ್ಮ ಜೋಡಿಗಳೊಂದಿಗೆ ರೆಡ್ ಕಾರ್ಪೆಟ್ ನಲ್ಲಿ ನಡೆದು ಮಿಂಚು ಹರಿಸಿದ್ದರು.

ಇದೇ ಕಾರ್ಯಕ್ರಮಕ್ಕೆ ಬಾಲಿವುಡ್ ಕ್ಯೂಟ್ ಆ್ಯಂಡ್ ಯಂಗ್ ಕಪಲ್ ಶಾಹಿದ್ ಕಪೂರ್ ತಮ್ಮ ಪತ್ನಿ ಮೀರಾ ರಜಪೂತ್ ಜೊತೆ ಆಗಮಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶಾಹಿದ್ ಕಪೂರ್ ಮತ್ತು ಮೀರಾ ಮಾಧ್ಯಮಗಳೊಂದಿಗೆ ‘ಪದ್ಮಾವತ್’ ಸಿನಿಮಾದ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಪಕ್ಕದಲ್ಲಿ ನಟಿ ವಾಣಿ ಕಪೂರ್ ಆಗಮಿಸುತ್ತಿದ್ದಂತೆ ಶಾಹಿದ್ ಮಾಧ್ಯಮಗೋಷ್ಠಿಯನ್ನು ಅರ್ಧಕ್ಕೆ ಬಿಟ್ಟು ಹೋಗಿ ಹಗ್ ಮಾಡಿಕೊಂಡು ಬರ ಮಾಡಿಕೊಂಡರು.

ಶಾಹಿದ್ ಪಕ್ಕದಲ್ಲಿ ನಿಂತಿದ್ದ ಪತ್ನಿ ಮೀರಾ ದೂರದಿಂದಲೇ ಮುಗಳ್ನಕ್ಕರು. ಆದ್ರೆ ಮೀರಾ ಮುಖದಲ್ಲಾದ ಆ ಕ್ಷಣದ ಭಾವನೆಗಳು ಮಾತ್ರ ಬೇಸರ ತೋರಿಸುವಂತಿತ್ತು. ವಾಣಿ ಕಪೂರ್ ತಾವಾಗಿಯೇ ಬಂದು ಮೀರಾರನ್ನು ಹಗ್ ಮಾಡಿಕೊಂಡು ಕ್ಷೇಮ ವಿಚಾರಿಸಿದ್ರು. ವಾಣಿ ಕಪೂರ್ ಕಪ್ಪು ಬಣ್ಣದ ಬ್ಯಾಕ್ ಲೆಸ್ ನೆಟ್ ಗೌನ್ ಧರಿಸಿ ಹಾಟ್ ಆಗಿ ಮಿಂಚುತ್ತಿದ್ದರು. ಇದನ್ನೂ ಓದಿ: ಶಾಹಿದ್ ಕಪೂರ್ ಹಾಟ್ ಫೋಟೋಗೆ ಪತ್ನಿ ಕಮೆಂಟ್ ಮಾಡಿದ್ದು ಹೀಗೆ

ಪತಿಗೆ ತಿರುಗೇಟು?: ನಟಿಯನ್ನು ಬರಮಾಡಿಕೊಂಡ ಶಾಹಿದ್ ಮಾಧ್ಯಮಗಳ ಜೊತೆ ಮಾತುಕತೆ ನಡೆಸಿದರು. ಮಾಧ್ಯಮಗಳ ಜೊತೆ ಮಾತನಾಡುವಾಗ ಮೀರಾ ಪತಿ ಪಕ್ಕವೇ ನಿಂತುಕೊಂಡು ಕ್ಯಾಮೆರಾಗಳಿಗೆ ಸ್ಮೈಲ್ ನೀಡುತ್ತಿದ್ರು. ವಾಣಿ ಕಪೂರ್ ಹಿಂದೆಯೇ ‘ಐಸ್’ ಚಿತ್ರದ ನಿರ್ದೇಶಕ ಇಮ್ತಿಯಾಜ್ ಅಲಿ ಬಂದರು. ಕೂಡಲೇ ಪತಿ ಪಕ್ಕದಲ್ಲಿ ನಿಂತಿದ್ದ ಮೀರಾ ಮುಂದೆ ಹೋಗಿ ಇಮ್ತಿಯಾಜ್ ಅಲಿಯನ್ನು ಹಗ್ ಮಾಡಿಕೊಂಡು ಸ್ವಾಗತ ಮಾಡಿಕೊಂಡರು.

ಈ ಬಾರಿ ಪತ್ನಿಯನ್ನು ನೋಡಿದ ಶಾಹಿದ್ ಸ್ವಲ್ಪ ಕಸಿವಿಸಿಗೊಂಡರು. ಈ ಎಲ್ಲ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement
Advertisement