Connect with us

Bollywood

ಪದ್ಮಾವತಿ ಚಿತ್ರಕ್ಕೆ ಶಾಹಿದ್ ಕಪೂರ್ ರಾಯಲ್ ಕಾಸ್ಟ್ಯೂಮ್ ತಯಾರಾಗಿದ್ದು ಹೀಗೆ

Published

on

ಮುಂಬೈ: ಪದ್ಮಾವತಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್ ನೋಡಿ ಎಲ್ಲರೂ ಹುಬ್ಬೇರಿಸಿದ್ದರು. ಸೋಮವಾರ ಬಿಡುಗಡೆಯಾದ ಶಾಹಿದ್ ಕಪೂರ್ ಅವರ ಮಹಾರಾವಲ್ ರತನ್ ಸಿಂಗ್ ಫಸ್ಟ್ ಲುಕ್ ಕೂಡ ಜನರು ಸಾಕಷ್ಟು ಇಷ್ಟಪಟ್ಟಿದ್ದಾರೆ. ಈ ಚಿತ್ರಕ್ಕೆ ಶಾಹಿದ್ ಕಪೂರ್ ಅವರ ಕಾಸ್ಟ್ಯೂಮ್ ವಿನ್ಯಾಸಕ್ಕಾಗಿಯೇ 4 ತಿಂಗಳು ಹಿಡಿದಿದೆ ಹಾಗೂ 22 ಕಲಾವಿದರು ಡಿಸೈನ್ ಮಾಡಿದ್ದಾರೆ.

ಪದ್ಮಾವತಿ ಚಿತ್ರದಲ್ಲಿ ಶಾಹಿದ್ ಕಪೂರ್ ಅವರ ಕಾಸ್ಟ್ಯೂಮ್ ವಿನ್ಯಾಸ ಮಾಡುವುದೇ ನಮಗೆ ಚಾಲೆಂಜಿಂಗ್ ಆಗಿತ್ತು. ಚಿತ್ರದಲ್ಲಿ ಶಾಹಿದ್ ಹಾಕುವ ಪ್ರತಿಯೊಂದು ಕಾಸ್ಟ್ಯೂಮ್ ಹಿಂದೆಯೂ ಸಾಕಷ್ಟು ಸಂಶೋಧನೆ ನಡೆದಿದೆ ಎಂದು ಡಿಸೈನರ್ ರಿಂಪಲ್ ಹಾಗೂ ಹರ್‍ಪ್ರೀತ್ ನರುಲಾ ಹೇಳಿದ್ದಾರೆ.

ಚಿತ್ರದಲ್ಲಿ ನೈಜತೆ ಕಾಪಾಡಿಕೊಳ್ಳುವ ಸಲುವಾಗಿ 14ನೇ ಶತಮಾನದ ಉಡುಗೆಯ ಸ್ಟೈಲ್ ಹಾಗೂ ಚಿತ್ತೂರ್‍ನ ಹವಾಮಾನ ಎಲ್ಲವನ್ನೂ ಪರಿಗಣಿಸಿ ನಂತರ ಕಾಸ್ಟ್ಯೂಮ್ ಅಂತಿಮಗೊಳಿಸಲಾಯ್ತು. ರಾಜಸ್ಥಾನದಿಂದ ಸಾವಯುವ ಬಟ್ಟೆಗಳನ್ನು ತರಿಸಲಾಗಿತ್ತು ಹಾಗೂ 22 ಸ್ಥಳೀಯ ಕಲಾವಿದರು ಕಸೂತಿ ಮಾಡಿದ್ರು. ಮಸ್ಲಿನ್ ಬಟ್ಟೆಯನ್ನೇ ಇಟ್ಟುಕೊಂಡು ಅದಕ್ಕೆ ತರಕಾರಿಯ ಡೈ ಹಾಗೂ ಹ್ಯಾಂಡ್ ಡೈ ಬಳಸಲಾಗಿದೆ ಅಂತ ಹೇಳಿದ್ರು

4 ತಿಂಗಳ ಈ ಸುದೀರ್ಘ ಪ್ರಕ್ರಿಯೆಯಲ್ಲಿ ಸಂಶೋಧನೆಗಾಗಿಯೇ ಜೈಪುರ್ ಹಾಗೂ ಅಹಮ್ಮದಬಾದ್‍ನ ಮ್ಯೂಸಿಯಂಗಳನ್ನ ಭೇಟಿ ಮಾಡಿದ್ದೇವೆ. ಆಗಿನ ಕಾಲದ ಬಟ್ಟೆಗಳು ಹಾಗೂ ಪುರಾತನ ವಸ್ತ್ರಗಳ ಸ್ಯಾಂಪಲ್‍ಗಳನ್ನ ಜಗತ್ತಿನಾದ್ಯಂತ ಹಲವಾರು ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. ಈ ಎಲ್ಲಾ ಮ್ಯೂಸಿಯಂಗಳಿಗೆ ಭೇಟಿ ನೀಡುವ ನಮ್ಮ ಕನಸು ಈಡೇರಿತು. ಕ್ಯಾಲಿಕೋ ಮ್ಯೂಸಿಯಂ ಮತ್ತು ಜೈಪುರ್‍ನ ಕೆಲವು ಮ್ಯೂಸಿಯಂಗಳಿಗೆ ನಾವು ಭೇಟಿ ನೀಡಿದೆವು. ಸಾಮಾನ್ಯವಾಗಿ ಮಾರ್ಕೆಟ್‍ಗಳಲ್ಲಿ ಪುರಾತನ ಶೈಲಿಯ ಆಭರಣಗಳನ್ನ ಸಂಗ್ರಹಿಸೋ ಅಭ್ಯಾಸವಿತ್ತು. ಅದನ್ನೆಲ್ಲಾ ಇಲ್ಲಿ ಬಳಸಿಕೊಂಡೆವು ಎಂದು ರಿಂಪಲ್ ತಿಳಿಸಿದ್ರು.

Click to comment

Leave a Reply

Your email address will not be published. Required fields are marked *

www.publictv.in