Connect with us

Bollywood

ದೀಪಾವಳಿಯಂದು `ಮೀಟರ್ ಚಾಲೂ’ ಮಾಡಿದ ಶಾಹಿದ್ ಕಪೂರ್!

Published

on

ಮುಂಬೈ: ಶಾಹಿದ್ ಕಪೂರ್ ನಟನೆಯ ಈ ವರ್ಷದ ಬಹು ನಿರೀಕ್ಷಿತ ಚಿತ್ರ ‘ಪದ್ಮಾವತಿ’ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಆದರೆ ಶಾಹಿದ್ ನಟನೆಯ ಮುಂದಿನ ಚಿತ್ರದ ಟೈಟಲ್ ಇಂದು ಘೋಷಣೆಯಾಗಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ.

ಟಾಯ್ಲೆಟ್- ಏಕ್ ಪ್ರೇಮ್ ಕಥಾ ಚಿತ್ರದ ನಿರ್ದೇಶಕ ಶ್ರೀ ನಾರಾಯಣ್ ಸಿಂಗ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ‘ಬತ್ತಿ ಗುಲ್ ಮೀಟರ್ ಚಾಲೂ’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಶಾಹಿದ್ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದು, ಜನಸಾಮಾನ್ಯರು ಹೆಚ್ಚು ಬಿಲ್ ಕಟ್ಟುವಂತೆ ಮಾಡುವ ವಿದ್ಯುತ್ ಸರಬರಾಜು ಕಂಪೆನಿಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ವಿಚಾರದ ಬಗ್ಗೆ ಬೆಳಕು ಚೆಲ್ಲುಲು ದೀಪಾವಳಿಯ ಸಂದರ್ಭ ಸೂಕ್ತವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿ ದಿನದಂದು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ಒಳ್ಳೆಯ ಸಂದರ್ಭ. ಮನರಂಜನೆಯ ಜೊತೆಗೆ ಒಳ್ಳೆಯ ಸಂದೇಶ ಕೊಡುವಂತೆ ಚಿತ್ರವನ್ನ ತಯಾರಿಸಬೇಕೆಂದಿದ್ದೇವೆ ಅಂತ ಚಿತ್ರದ ನಿರ್ದೇಶಕ ಹೇಳಿದ್ದಾರೆ.

ಶಾಹಿದ್ ತನ್ನ ಇತ್ತೀಚಿನ ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಹೈದರ್ ಹಾಗೂ ಉಡ್ತಾ ಪಂಜಾಬ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದರು. ಈಗ ಪದ್ಮಾವತಿ ಸಿನಿಮಾದಲ್ಲೂ ರಜಪೂತ ರಾಜಾ ಮಹಾರಾವಲ್ ರತನ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಪದ್ಮಾವತಿ ಚಿತ್ರದ ಬಿಡುಗಡೆಗೆ ಡಿಸೆಂಬರ್ 1ರಂದು ದಿನಾಂಕ ನಿಗದಿಯಾಗಿದೆ.

Click to comment

Leave a Reply

Your email address will not be published. Required fields are marked *