ಮುಂಬೈ: ಬಾಲಿವುಡ್ ಮಂದಿ ಟ್ರೋಲಿಗರಿಗೆ ಆಹಾರವಾಗುತ್ತಿರುವುದು ಹೊಸದೇನು ಅಲ್ಲ. ನಟ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರು ಮಾಲ್ಡೀವ್ಸ್ ಪ್ರವಾಸ ಮುಗಿಸಿ ವಾಪಸ್ ಬರುವಾಗ ಮುಂಬೈ ಏರ್ಪೋರ್ಟ್ನಲ್ಲಿ ಮೀರಾ ಧರಿಸಿದ್ದ ಡ್ರೆಸ್ ಎಲ್ಲರ ಕಣ್ಣು ಕುಕ್ಕಿದೆ.
ಪತ್ನಿ ಮೀರಾ ರಜಪೂತ್, ಮಕ್ಕಳಾದ ಮಿಶಾ ಮತ್ತು ಝೈನ್ ಜೊತೆಗೆ ಬಾಲಿವುಡ್ ನಟ ಶಾಹೀದ್ ಕಪೂರ್ ಮಾಲ್ದೀವ್ಸ್ ಪ್ರವಾಸಕ್ಕೆ ಹೋಗಿದ್ದರು. ಮಾಲ್ದೀವ್ಸ್‍ನಲ್ಲಿ ಕೆಲ ದಿನಗಳನ್ನು ಕಳೆದ ಶಾಹೀದ್ ಕಪೂರ್ ಮತ್ತು ಫ್ಯಾಮಿಲಿ ಮೊನ್ನೆಯಷ್ಟೇ ಮುಂಬೈಗೆ ವಾಪಸ್ ಆದರು. ಮುಂಬೈ ವಿಮಾನ ನಿಲ್ದಾಣಕ್ಕೆ ಶಾಹೀದ್ ಕಪೂರ್ ಅಂಡ್ ಫ್ಯಾಮಿಲಿ ಬಂದಿಳಿದಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಇದನ್ನೂ ಓದಿ: ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!
ಮೀರಾ ರಜಪೂತ್ ಶಾರ್ಟ್ಸ್ ಧರಿಸಿದ್ದರು. ಶಾರ್ಟ್ಸ್ ತೀರಾ ಚಿಕ್ಕದಾಗಿದ್ರಿಂದ ಮೀರಾ ರಜಪೂತ್ ಟ್ರೋಲ್ ಆಗಿದ್ದಾರೆ. ಮೀರಾ ರಜಪೂತ್ ಪ್ಯಾಂಟ್ ಹಾಕಿದ್ರೆ ಚೆನ್ನಾಗಿರುತ್ತಿತ್ತು, ಪ್ಯಾಂಟ್ ಹಾಕೋದನ್ನ ಮೀರಾ ಮರೆತುಬಿಟ್ರಾ?, ಮೈ ಪೂರ್ತಿ ಬಟ್ಟೆ ಧರಿಸಿ. ನಿಮ್ಮ ಶಾರ್ಟ್ಸ್ ಎಷ್ಟು ಚಿಕ್ಕದಾಗಿದೆ ಏನೂ ಧರಿಸಿಲ್ಲವೆಂಬಂತೆಯೇ ಕಾಣುತ್ತಿದೆ, ಪುರುಷರ ಮೇಲಿನ ಗೌರವ ನನಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಯಾಕಂದ್ರೆ ಸಾರ್ವಜನಿಕ ಪ್ರದೇಶಗಳಲ್ಲಿ ಮೈತುಂಬಾ ಬಟ್ಟೆ ತೊಟ್ಟು ಪುರುಷರು ತಮ್ಮ ಗೌರವವನ್ನು ಕಾಪಾಡಿಕೊಳ್ಳುತ್ತಾರೆ. ಮಗು ಮೈತುಂಬಾ ಬಟ್ಟೆ ಧರಿಸಿದೆ. ಆದರೆ ತಾಯಿನೇ ಪ್ಯಾಂಟ್ ಹಾಕಿಲ್ಲ ಅಂತೆಲ್ಲಾ ಟ್ರೋಲಿಗರು ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಇಂಡೋನೇಷ್ಯಾ ಸಂಸ್ಥಾಪಕನ ಪುತ್ರಿ ಮತಾಂತರ
View this post on Instagram
2015 ಜುಲೈ 7ರಂದು ಶಾಹೀದ್ ಕಪೂರ್, ಮೀರಾ ರಜಪೂತ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶಾಹೀದ್ ಕಪೂರ್ ಮತ್ತು ಮೀರಾ ರಜಪೂತ್‍ರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಕಳೆದ ಜುಲೈ ತಿಂಗಳಿನಲ್ಲಿ ತಮ್ಮ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.