BollywoodCinemaKarnatakaLatestMain PostSandalwood

ಬಾಲಿವುಡ್ ನಲ್ಲೂ ಯಶ್ ನಂಬರ್-1 ನಟ ಎಂದು ಹೇಳಿ ಅಚ್ಚರಿ ಮೂಡಿಸಿದ ಶಾಹಿದ್ ಕಪೂರ್

ಬಾಲಿವುಡ್ ನಲ್ಲಿ ಈವರೆಗೂ ಖಾನ್, ಕಪೂರ್ ಗಳೇ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದರು. ಇವರ ಹೊರತಾಗಿ ನಂಬರ್ ಗೇಮ್ ನಲ್ಲಿ ಯಾರೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇಂಥದ್ದೊಂದು ಭದ್ರಕೋಟೆಯನ್ನು ಮೊದಲ ಬಾರಿಗೆ ಬೇಧಿಸಿದವರು ಕನ್ನಡದ ಹೆಮ್ಮೆಯ ನಟ ಯಶ್. ಕೆಜಿಎಫ್ 2 ಸಿನಿಮಾ 2022ರಲ್ಲಿ ಅತೀ ಹೆಚ್ಚು ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 425 ಕೋಟಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ.

ಈವರೆಗೂ ಯಾವ ಹಿಂದಿ ಸಿನಿಮಾವೂ ಮಾಡದೇ ಇರುವ ದಾಖಲೆಯನ್ನು ಕೆಜಿಎಫ್ 2 ಸಿನಿಮಾ ಮಾಡಿದ್ದರಿಂದ, ಬಾಲಿವುಡ್ ನಲ್ಲಿ ನಂಬರ್ 1 ನಟ ಯಾರು ಅಂತ ಕೇಳಿದರೆ, ಥಟ್ಟನೆ ಯಶ್ ನೆನಪಾಗುತ್ತಿದ್ದಾರೆ. ಇದು ಕನ್ನಡಿಗರು ಹೇಳುತ್ತಿರುವ ಮಾತಲ್ಲ, ಸ್ವತಃ ಬಾಲಿವುಡ್ ನ ಹೆಸರಾಂತ ನಟ ಶಾಹಿದ್ ಕಪೂರ್ ಅವರೇ ಹೇಳಿರುವ ಮಾತು. ಹಿಂದಿಯಲ್ಲೂ ಯಶ್ ಅವರೇ ನಂ.1 ನಟ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:ಅಕ್ಷತಾ‌ ಜೊತೆ ರಾಕೇಶ್ ಅಡಿಗ ರೊಮ್ಯಾನ್ಸ್: ಸೋನು ಫುಲ್ ಗರಂ

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಹಿದ್, ಬಾಲಿವುಡ್ ನಲ್ಲಿ ಈ ವರ್ಷ ನಂಬರ್ ಒನ್  ಪಟ್ಟ ಯಾರಿಗೆ ಸಲ್ಲುತ್ತದೆ ಎಂದು ಪ್ರಶ್ನೆ ಮಾಡಿದಾಗ, ಕ್ಷಣವೂ ಯೋಚಿಸದೇ ‘ರಾಕಿಭಾಯ್’ ಎಂದು ಉತ್ತರಿಸುತ್ತಾರೆ ಶಾಹಿದ್. ಸ್ವತಃ ಈ ಉತ್ತರವನ್ನು ಕರಣ್ ಕೂಡ ಅರಗಿಸಿಕೊಳ್ಳುವುದಿಲ್ಲ. ಮತ್ತೆ ಪ್ರಶ್ನೆ ಮಾಡುತ್ತಾರೆ. ಆಗಲೂ ರಾಕಿ ಭಾಯ್ ಎನ್ನುವ ಉತ್ತರವೇ ಬರುತ್ತದೆ. ಅಷ್ಟರ ಮಟ್ಟಿಗೆ ಯಶ್ ಬಾಲಿವುಡ್ ಅನ್ನು ಆವರಿಸಿಕೊಂಡಿದ್ದಾರೆ.

Live Tv

Leave a Reply

Your email address will not be published.

Back to top button