ಕಿಸ್ಸಿಂಗ್ ಸೀನ್ ಬಗ್ಗೆ ನಟಿಯನ್ನು ಪ್ರಶ್ನಿಸಿದ್ದಕ್ಕೆ ಶಾಹಿದ್ ಗರಂ

Public TV
1 Min Read
shahid kapoor collage

ಮುಂಬೈ: ನಟ ಶಾಹಿದ್ ಕಪೂರ್ ನಟಿಸಿದ ‘ಕಬೀರ್ ಸಿಂಗ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಗಳಿದ್ದು, ಮಾಧ್ಯಮದವರು ಈ ಬಗ್ಗೆ ನಟಿ ಕೈರಾ ಅಡ್ವಾನಿಯನ್ನು ಪ್ರಶ್ನಿಸಿದ್ದಕ್ಕೆ ಶಾಹಿದ್ ಕಪೂರ್ ಗರಂ ಆದರು.

ಚಿತ್ರದ ಟ್ರೈಲರ್ ಲಾಂಚ್ ಸಂದರ್ಭದಲ್ಲಿ ಶಾಹಿದ್ ಕಪೂರ್, ಕೈರಾ ಅಡ್ವಾನಿ ಹಾಗೂ ಚಿತ್ರತಂಡ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರು ಚಿತ್ರದ ಬಗ್ಗೆ ಚಿತ್ರತಂಡದವರನ್ನು ಪ್ರಶ್ನಿಸಿದ್ದರು. ಮಾಧ್ಯಮಗಳ ಪ್ರಶ್ನೆಗೆ ಚಿತ್ರತಂಡ ನಗುತ್ತಾ ಹಾಸ್ಯಭರಿತ ಉತ್ತರವನ್ನೇ ನೀಡುತ್ತಿದ್ದರು.

shahid kapoor

ಟ್ರೈಲರ್ ಲಾಂಚ್ ಸಂದರ್ಭದಲ್ಲಿ ವರದಿಗಾರರೊಬ್ಬರು, “ಈ ಚಿತ್ರದಲ್ಲಿ ನಿಮ್ಮ ಹಾಗೂ ಶಾಹಿದ್ ನಡುವೆ ಒಟ್ಟು ಎಷ್ಟು ಕಿಸ್ಸಿಂಗ್ ಸೀನ್ ಇದೆ” ಎಂದು ಕೈರಾರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕೈರಾ “ನಾನು ಎಷ್ಟು ಕಿಸ್ ಮಾಡಿದೆ ಎಂದು ಎಣಿಸಲಿಲ್ಲ” ಎಂದು ನಗುತ್ತಾ ಉತ್ತರಿಸಿದ್ದರು.

ಇದಾದ ಬಳಿಕವೂ ಅವರು ಮತ್ತೆ ಕಿಸ್ ಬಗ್ಗೆ ಕೈರಾರನ್ನು ಪ್ರಶ್ನಿಸಿದ್ದರು. ಆಗ ಶಾಹಿದ್ ನಿಮಗೆ ದೀರ್ಘಕಾಲದ ಗೆಳತಿ ಇಲ್ಲವಾ? ನೀವು ಕಿಸ್ ಹೊರತಾಗಿ ಬೇರೆ ವಿಷಯದ ಬಗ್ಗೆ ಪ್ರಶ್ನಿಸಲು ಆಗಲ್ವಾ? ಈ ಚಿತ್ರದಲ್ಲಿ ನಾವು ಸಾಕಷ್ಟು ನಟನೆ ಕೂಡ ಮಾಡಿದ್ದೇವೆ ಎಂದು ವರದಿಗಾರನ ವಿರುದ್ಧ ಕೋಪಗೊಂಡಿದ್ದರು.

shahid kapoor 1

ಮತ್ತೊಬ್ಬ ವರದಿಗಾರರು ಈ ಚಿತ್ರದ ಟ್ರೈಲರ್ ನಲ್ಲಿ ಕೇವಲ ಮದ್ಯ, ಸಿಗರೇಟ್, ಡ್ರಗ್ಸ್ ಗಳ ದೃಶ್ಯ ತುಂಬಿದೆ ಎಂದು ಈ ಬಗ್ಗೆ ಶಾಹಿದ್ ಅವರನ್ನು ಪ್ರಶ್ನಿಸಲಾಗಿತ್ತು. ಆಗ ಶಾಹಿದ್ ಮದ್ಯ ಹಾಗೂ ಸಿಗರೇಟ್ ಕೇವಲ ಸಿನಿಮಾದ ಪಾತ್ರಕ್ಕಾಗಿ ಉಪಯೋಗಿಸಲಾಗಿದೆ. ಪ್ರೇಕ್ಷಕರು ಈ ವಸ್ತುಗಳಿಂದ ಆಕರ್ಷಣೆಗೆ ಒಳಗಾಗಬಾರದು ಎಂದರು.

ತೆಲುಗಿನ `ಅರ್ಜುನ್ ರೆಡ್ಡಿ’ ಸಿನಿಮಾವನ್ನು ಹಿಂದಿಯಲ್ಲಿ `ಕಬೀರ್ ಸಿಂಗ್’ ಆಗಿ ರಿಮೇಕ್ ಮಾಡಲಾಗಿದೆ. ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ `ಅರ್ಜುನ್ ರೆಡ್ಡಿ’ ಆಗಿ ನಟಿಸಿದ್ದರು. ಸದ್ಯ ಕಬೀರ್ ಸಿಂಗ್ ಚಿತ್ರ ಜೂನ್ 21ರಂದು ಬಿಡುಗಡೆ ಆಗಲಿದೆ.

Share This Article