ಧೋನಿ ನಾಯಕತ್ವದಿಂದ ಕೊಹ್ಲಿ ಕಲಿಯುವುದು ಸಾಕಷ್ಟಿದೆ : ಶಾಹಿದ್ ಅಫ್ರಿದಿ

Public TV
1 Min Read
dhoni kohli 1

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನನ್ನ ಫೇವರೇಟ್ ಕ್ರಿಕೆಟ್ ಆಟಗಾರ ಆದರೂ ಧೋನಿ ನಾಯಕತ್ವದಿಂದ ಕೊಹ್ಲಿ ಕಲಿಯುವುದು ಸಾಕಷ್ಟಿದೆ ಎಂದು ಪಾಕ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಆಫ್ರಿದಿ, ಧೋನಿ ನಿವೃತ್ತಿ ಆಗುವಂತೆ ಹೇಳುವ ಅಧಿಕಾರ ಯಾರಿಗೂ ಇಲ್ಲ. 2019 ರಲ್ಲಿ ಟೀಂ ಇಂಡಿಯಾ ತಂಡದಲ್ಲಿ ಧೋನಿ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

SHAHID AFRIDI

ಕೊಹ್ಲಿ ಹಾಗೂ ಧೋನಿ ಇಬ್ಬರು ಕೂಡ ಅತ್ಯುತ್ತಮ ಆಟಗಾರರು. ಇಬ್ಬರ ನಾಯಕತ್ವವನ್ನ ಪರಸ್ಪರ ಹೋಲಿಕೆ ಮಾಡುವುದು ಸರಿ ಅಲ್ಲ. ಕೊಹ್ಲಿ ನನ್ನ ಫೇವರೇಟ್ ಆಟಗಾರ. ಆದರೆ ಧೋನಿ ನಾಯಕತ್ವದಿಂದ ವಿರಾಟ್ ಕೊಹ್ಲಿ ಕಲಿಯವುದು ಸಾಕಷ್ಟಿದೆ ಎಂದರು.

ಧೋನಿ ನಾಯಕತ್ವ ಮಾತ್ರವಲ್ಲದೇ ಅವರ ಬ್ಯಾಟಿಂಗ್ ಕೂಡ ನನಗೆ ಇಷ್ಟ. ಕೊಹ್ಲಿ ಬ್ಯಾಟಿಂಗ್‍ನಲ್ಲೂ ಧೋನಿ ಅವರನ್ನ ನೋಡಿ ಕಲಿಯುವುದು ಇದೆ. ಆದರೆ ವಿಶ್ವ ಕ್ರಿಕೆಟ್‍ನಲ್ಲಿ ಸದ್ಯ ಕೊಹ್ಲಿ ನಂ.1 ಬ್ಯಾಟ್ಸ್‍ಮನ್ ಆಗಿದ್ದು, ಹಲವು ದಾಖಲೆ ಬರೆಯಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕೊಹ್ಲಿ ನಾಯಕತ್ವದಲ್ಲಿ ಆಸೀಸ್ ಪ್ರವಾಸದಲ್ಲಿ ಇರುವ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಲಿದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *