ಬೆಂಗಳೂರು: ಶನಿವಾರ ನಡೆದ ಲೆಜೆಂಡ್ಸ್ ಲೀಗ್ (Legends League Cricket) ಎಲಿಮಿನೇಟರ್ ಪಂದ್ಯದಲ್ಲಿ ಏಷ್ಯಾ ಲಯನ್ಸ್, ಇಂಡಿಯಾ ಮಹಾರಾಜಾಸ್ (India Maharajas) ವಿರುದ್ಧ 85 ರನ್‌ಗಳ ಭರ್ಜರಿ ಜಯ ಸಾಧಿಸಿತು.
???????????? ???????????? ???????????????? ???? ???????????? ???????????????????? ????
Shahid Afridi gives an autograph to a fan on the Indian flag ????#LLC2023 @SAfridiOfficial pic.twitter.com/LonnLwlDAt
— Cricket Pakistan (@cricketpakcompk) March 19, 2023
Advertisement
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕ್ರಿಕೆಟ್ ದಂಥಕತೆ ಶಾಹಿದ್ ಅಫ್ರಿದಿ (Shahid Afridi) ನಾಯಕತ್ವದ ಏಷ್ಯಾ ಲಯನ್ಸ್ (Asia Lions) ತಂಡವು 20 ಓವರ್‌ಗಳಲ್ಲಿ 191 ರನ್ ಬಾರಿಸಿತ್ತು. ಉಪುಲ್ ತರಂಗ 31 ಎಸೆತಗಳಲ್ಲಿ 50 ರನ್, ಮೊಹಮ್ಮದ್ ಹಫೀಜ್ 24 ಎಸೆತಗಳಲ್ಲಿ 38 ರನ್ ಗಳಿಸಿ ಮಿಂಚಿದ್ದರು. ಈ ಗುರಿ ಬೆನ್ನತ್ತಿದ್ದ ಇಂಡಿಯಾ ಮಹಾರಾಜಾಸ್ 106 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಏಷ್ಯಾ ಲಯನ್ಸ್ ತಂಡವು 85 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜವನ್ನೇ ಹಿಡಿದಿದ್ದಳು – ಶಾಹಿದ್ ಅಫ್ರಿದಿ
Advertisement
Advertisement
ಪಂದ್ಯದ ಬಳಿಕ ಅಭಿಮಾನಿಯೊಬ್ಬರು ಅಫ್ರಿದಿ ಬಳಿಬಂದು ಆಟೋಗ್ರಾಫ್ ಕೇಳಿದರು. ಒಂದು ಕ್ಷಣವೂ ಯೋಚಿಸದ ಅಫ್ರಿದಿ, ಗೌರವದಿಂದಲೇ ಅಭಿಮಾನಿಯಿಂದ ಭಾರತದ ರಾಷ್ಟ್ರಧ್ವಜ (Indian Flag) ಪಡೆದು ಅದರ ಮೇಲೆ ಆಟೋಗ್ರಾಫ್ ಹಾಕಿಕೊಟ್ಟರು. ಈ ವೀಡಿಯೋ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕಳಪೆ ಬ್ಯಾಟಿಂಗ್ – ಸೂರ್ಯನ ವಿರುದ್ಧ ಸಿಡಿದ ಅಭಿಮಾನಿಗಳು
Advertisement
2022ರ ಏಷ್ಯಾಕಪ್ ಸಂದರ್ಭದಲ್ಲಿ ಏಷ್ಯಾಕಪ್ ಟೂರ್ನಿ ಕುರಿತು ಮಾತನಾಡಿದ್ದ ಅಫ್ರಿದಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ 2022ರ ಪಂದ್ಯದ ವೇಳೆ ನನ್ನ ಮಗಳು ಪಾಕಿಸ್ತಾನ ಧ್ವಜಕ್ಕಿಂತ ಭಾರತ ಧ್ವಜವನ್ನೇ ಹಿಡಿದು ಬೀಸುತ್ತಿದ್ದಳು ಎಂದು ಹೇಳಿಕೊಂಡಿದ್ದರು.