ಇಸ್ಲಾಮಾಬಾದ್: ಪಾಕಿಸ್ತಾನದ ಆಲ್ ರೌಂಡರ್ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.
ಭಾನುವಾರದಂದು ಅಫ್ರಿದಿ ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದುತ್ತಿರುವ ಬಗ್ಗೆ ಘೋಷಿಸಿದ್ರು. 36 ವರ್ಷದ ಅಫ್ರೀದಿ ಈಗಾಗಲೇ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಪಂದ್ಯಗಳಿಂದ ನಿವೃತ್ತರಾಗಿದ್ರು.
Advertisement
2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಅಫ್ರಿದಿ ತಂಡದ ನಾಯಕತ್ವ ವಹಿಸಿದ್ರು. ಪಂದ್ಯಾವಳಿಯ ನಂತರ ನಾಯಕ ಸ್ಥಾನದಿಂದ ಕೆಳಗಿಳಿದಿದ್ರು.
Advertisement
ಅಫ್ರಿದಿ 1996ರಲ್ಲಿ 37 ಬಾಲ್‍ಗಳಿಗೆ ಸೆಂಚುರಿ ಬಾರಿಸಿ ಅಭಿಮಾನಿಗಳ ಫೇವರೇಟ್ ಆಟಗಾರಾಗಿದ್ದರು. ಅಂದು ಅಫ್ರಿದಿ ನಿರ್ಮಿಸಿದ್ದ ಈ ವಿಶ್ವದಾಖಲೆಯನ್ನ ಮುಂದಿನ 18 ವರ್ಷಗಳವರೆಗೆ ಯಾರೂ ಮುರಿದಿರಲಿಲ್ಲ.(ನ್ಯೂಜಿಲ್ಯಾಂಡಿನ ಕೋರಿ ಆಂಡರ್‍ಸನ್ 2014ರಲ್ಲಿ 36 ಬಾಲ್‍ಗಳಿಗೆ ಸೆಂಚುರಿ ಬಾರಿಸಿ ಈ ದಾಖಲೆ ಮುರಿದರು. ನಂತರ ಎಬಿ ಡಿವಿಲ್ಲಿಯರ್ಸ್ 2015ರಲ್ಲಿ 31 ಬಾಲ್‍ಗಳಿಗೆ ಸೆಂಚುರಿ ಬಾರಿಸಿದ್ದು ಸದ್ಯದ ದಾಖಲೆಯಾಗಿದೆ.)
Advertisement
ಅಫ್ರಿದಿ 523 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 10,645 ರನ್ ಹಾಗೂ 540 ವಿಕೆಟ್‍ಗಳನ್ನ ಪಡೆದಿದ್ದಾರೆ. 27 ಟೆಸ್ಟ್ ಪಂದ್ಯಗಳನ್ನ ಆಡಿದ್ದು, 156 ಅತ್ಯಧಿಕ ಸ್ಕೋರ್‍ನೊಂದಿಗೆ ಒಟ್ಟು 1716 ರನ್ ಹಾಗೂ 48 ವಿಕೆಟ್‍ಗಳನ್ನ ಪಡೆದಿದ್ದಾರೆ. 398 ಏಕದಿನ ಪಂದ್ಯಗಳನ್ನ ಆಡಿದ್ದು, 124 ರನ್‍ಗಳ ಅತ್ಯಧಿಕ ಸ್ಕೋರ್‍ನೊಂದಿಗೆ ಒಟ್ಟು 8064 ರನ್ ಹಾಗೂ 395 ವಿಕೆಟ್‍ಗಳನ್ನ ಪಡೆದಿದ್ದಾರೆ. 98 ಟಿ20 ಪಂದ್ಯಗಳನ್ನಾಡಿ 1405 ರನ್ ಹಾಗೂ 97 ವಿಕೆಟ್‍ಗಳನ್ನ ಪಡೆದಿದ್ದಾರೆ.
Advertisement