ಬಾಲಿವುಡ್ ಬಾದಷಾ ಶಾರುಖ್ ಖಾನ್‌ಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಇದೆ. ನೆಚ್ಚಿನ ನಟ ಹುಟ್ಟುಹಬ್ಬವನ್ನ ಮನೆಯ ಹಬ್ಬ ಎಂಬಂತೆ ಅಪಾರ ಅಭಿಮಾನಿಗಳು ಜಮಾಯಿಸುತ್ತಾರೆ. ಇದೀಗ ಶಾರುಖ್ ಮುಂಬೈನ ಮನ್ನತ್ ಮನೆಗೆ ವಜ್ರದ ಅಲಂಕಾರ ಮಾಡಿಸಿದ್ದಾರೆ. ಈ ಕುರಿತ ಫೋಟೋ ಎಲ್ಲೆಡೆ ಸದ್ದು ಮಾಡುತ್ತಿದೆ.
ಬಿಟೌನ್‌ನ ಎವರ್‌ಗ್ರೀನ್ ನಟ ಶಾರುಖ್ ನಟನೆಯ ಸಿನಿಮಾಗಳನ್ನ ಕಾದು ನೋಡುವ ಅಭಿಮಾನಿಗಳಿದ್ದಾರೆ. ಇನ್ನೂ ಪ್ರತಿ ವರ್ಷ ಅವರ ಹುಟ್ಟುಹಬ್ಬದ ದಿನ ಮನೆ ಎದುರು ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಕಿಂಗ್ ಖಾನ್ ಅವರ ಮನ್ನತ್ ನಿವಾಸಕ್ಕೆ ವಿಶೇಷ ಆಕರ್ಷಣೆ ಇದೆ. ಈ ಐಷಾರಾಮಿ ಬಂಗಲೆ ಯಾವ ಅರಮನೆಗೂ ಕಮ್ಮಿ ಇಲ್ಲದ ಶಾರುಖ್ ಮನೆಗೆ ಆಗಾಗ ಬಾಲಿವುಡ್ ಸೆಲೆಬ್ರಿಟಿಗಳು ಪಾರ್ಟಿ ಮಾಡುತ್ತಾರೆ. ಈಗ ಶಾರುಖ್ ಖಾನ್ ಮನೆ ಬಗ್ಗೆ ಹೊಸ ಅಪ್‌ಡೇಟ್ ಕೇಳಿಬಂದಿದೆ. ಮನ್ನತ್ ನಿವಾಸದ ಗೇಟಿಗೆ ವಜ್ರದ ಅಲಂಕಾರ ಮಾಡಲಾಗಿದೆ. ಅದರ ಫೋಟೋಗಳು ಕೂಡ ವೈರಲ್ ಆಗಿವೆ. ಇದನ್ನೂ ಓದಿ:ಕೇಕ್ ಕತ್ತರಿಸಿ ಸಕ್ಸಸ್ ಆಚರಿಸಿದ ʻಗಂಧದ ಗುಡಿʼ ಟೀಮ್
After 2 months #Mannat new gate design is unveiled and it’s super awesome.
What do you think guys? ????#GauriKhan #ShahRukhKhan pic.twitter.com/w2VcF2AEl9
— Team Shah Rukh Khan Fan Club (@teamsrkfc) November 19, 2022
ಶಾರುಖ್ ಖಾನ್ ಅವರ ಫ್ಯಾನ್ ಪೇಜ್‌ಗಳಲ್ಲಿ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಕಿಂಗ್ ಖಾನ್ ನಿವಾಸದ ಮುಖ್ಯ ದ್ವಾರದಲ್ಲಿ ಮನ್ನತ್ ಎಂದು ನೇಮ್ ಪ್ಲೇಟ್ ಹಾಕಿಸಲಾಗಿದೆ. ಅದನ್ನು ವಜ್ರದಿಂದ ಅಲಂಕರಿಸಲಾಗಿದೆ. ಈ ವೈಭೋಗ ಕಂಡು ಅಭಿಮಾನಿಗಳು ಸೂಪರ್ ಎನ್ನುತ್ತಿದ್ದಾರೆ. ವಜ್ರದ ನೇಮ್‌ಪ್ಲೇಟ್ ಹೊಂದಿರುವ ಕಾರಣದಿಂದ ಮನ್ನತ್ ಈಗ ಮತ್ತಷ್ಟು ಹೈಲೈಟ್ ಆಗಿ ಕಾಣುತ್ತಿದೆ.