ಕಿಂಗ್‌ಖಾನ್ ಶಾರುಖ್ ಖಾನ್ (Shah Rukh Khan) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ವಿಶೇಷ ತಮ್ಮ ಮುಂದಿನ ಸಿನಿಮಾ ಟೈಟಲ್ ರಿವೀಲ್ ಆಗಿದೆ. ರಗಡ್ ಅಂಡ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ಅಭಿಮಾನಿಗಳ ಕ್ರೇಜ್ ಮತ್ತಷ್ಟು ಹೆಚ್ಚಿಸಿದ್ದಾರೆ. 60ನೇ ವಸಂತಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟ ಶಾರುಖ್ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತಹ ಗಿಫ್ಟ್ ನೀಡಿದ್ದಾರೆ.
ಸಿದ್ಧಾರ್ಥ ಆನಂದ್ ನಿರ್ದೇಶನದ ಕಿಂಗ್ ಸಿನಿಮಾದ ಟೈಟಲ್ ರಿವೀಲ್ ಆಗಿದ್ದು, ಟೈಟಲ್‌ನಿಂದಲೇ ಕಿಂಗ್‌ಖಾನ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹೊಸ ಅವತಾರದಲ್ಲಿ ಎಂಟ್ರಿಕೊಟ್ಟ ಶಾರುಖ್ ಸ್ವಾಗ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಆಗ್ತಿರುವ ಕಿಂಗ್ (KING) ಚಿತ್ರದ ಫಸ್ಟ್ ಲುಕ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ಪ್ರಕರಣ : ವಿಜಯ್ ದಳಪತಿ ಬೆನ್ನಿಗೆ ನಿಂತ ತಲಾ ಅಜಿತ್
ಅಂದಹಾಗೆ ಶಾರುಖ್ ಖಾನ್ ಜೊತೆ `ಪಠಾಣ್’ ಸಿನಿಮಾ ಮಾಡಿ ಸೂಪರ್ ಹಿಟ್ ನೀಡಿದ್ದ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ಈಗ `ಕಿಂಗ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಬಾರಿ ಶಾರುಖ್ ಖಾನ್ ಅವರನ್ನು ಭಾರಿ ರಗಡ್ ಅವತಾರದಲ್ಲಿ ತೋರಿಸಲು ಸಿದ್ದಾರ್ಥ್ ಆನಂದ್ ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಂದ ಕಿಂಗ್ ಸಿನಿಮಾದ ಟೀಸರ್‌ಗೆ ಮೆಚ್ಚುಗೆ ಸಿಗುತ್ತಿದೆ.

