ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಅರೆಸ್ಟ್ ಆದ ನಂತರ ಶಾರೂಖ್ ಅಭಿಮಾನಿಗಳು ‘ಟೇಕ್ ಕೇರ್ ಕಿಂಗ್’ ಎಂದು ಹೇಳುವ ಮೂಲಕ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.
View this post on Instagram
ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಅಕ್ಟೋಬರ್ 3 ರಂದು ಕೇಂದ್ರ ಏಜೆನ್ಸಿ ರೇವ್ ಪಾರ್ಟಿ ಮಾಡಿದ ಆರೋಪದ ಮೇಲೆ ಬಂಧಿಸಿದೆ. ಇದರಿಂದ ಶಾರೂಖ್ ಖಾನ್ ಮತ್ತು ಅವರ ಕುಟುಂಬ ಕುಸಿದು ಹೋಗಿದೆ. ಈ ಹಿನ್ನೆಲೆ ಅವರ ಅಭಿಮಾನಿಗಳು ತಮ್ಮ ಬೆಂಬಲವನ್ನು ಸೂಚಿಸಲು ಮುಂಬೈನ ಮನ್ನತ್ನ ಶಾರುಖ್ ಮನೆಯ ಹೊರಗೆ ‘ಟೇಕ್ ಕೇರ್ ಕಿಂಗ್’ ಸಂದೇಶವನ್ನು ಪ್ರತಿಧ್ವನಿಸುತ್ತಿದ್ದಾರೆ. ಇದನ್ನೂ ಓದಿ: ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!
This smile is very precious.. it should not fade away at any cost.. ! @iamsrk sir we are always with you ! ❤️#WeStandWithSRK pic.twitter.com/97l1bOLLVC
— Adi_SRKian Arman bhai stan (@RajAdiMalhotra) October 4, 2021
ಮಂಗಳವಾರ, ಶಾರೂಖ್ ಖಾನ್ ಗೆ ತಮ್ಮ ಬೆಂಬಲವನ್ನು ಸೂಚಿಸಲು ಅವರ ಅಭಿಮಾನಿಗಳು ಮನ್ನತ್ ನ ಅವರ ಎಸ್ಆರ್ಕೆ ಬಂಗಲೆ ಬಳಿ ಬಂದಿದ್ದು, ಶಾರೂಖ್ನ ಹಲವು ಫೋಟೋವನ್ನು, ಬ್ಯಾನರ್ ಗಳನ್ನು ಹಿಡಿದುಕೊಂಡು, ಪ್ರಪಂಚದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ. ಅದಕ್ಕೆ ಯಾವುದೇ ಅಡೆ ತಡೆಗಳಿಲ್ಲ. ಏನೇ ಆದರೂ ನಾವು ನಿಮ್ಮ ಜೊತೆಗೆ ಇದ್ದೇವೆ. ‘ಟೇಕ್ ಕೇರ್ ಕಿಂಗ್’ ಎಂದು ಹೇಳುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣ – ಐಷಾರಾಮಿ ಹಡಗಿನಲ್ಲಿ ತಗ್ಲಾಕ್ಕೊಂಡ ಬೆಂಗಳೂರಿಗರು..!
#WeStandWithSRK & family. pic.twitter.com/MAee7R6rPI
— Manobala Vijayabalan (@ManobalaV) October 3, 2021
ಆರ್ಯನ್ ಅರೆಸ್ಟ್ ಆದ ನಂತರ ಶಾರೂಖ್ ಅಭಿಮಾನಿಳು #WeStandWithSRK ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವೀಟರ್ ನಲ್ಲಿಯೂ ಬೆಂಬಲ ಸೂಚಿಸುತ್ತಿದ್ದಾರೆ.