ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮನೆಗೆ ಶಾರುಖ್ ಖಾನ್ (Shahrukh Khan) ಪುತ್ರಿ ಸುಹಾನಾ (Suhana) ಸೊಸೆಯಾಗಿ ಬರುತ್ತಾರೆ ಎನ್ನುವ ಮಾತು ಹರಿದಾಡುತ್ತಿದೆ. ಇದು ನಂಬಲು ಅಸಾಧ್ಯವೆನಿಸಿದರೂ, ಸಾಧ್ಯವಾಗುವಂತಹ ವಿಚಾರಗಳನ್ನು ಬಿಟೌನ್ ತನ್ನ ಒಡಲಿಲ್ಲ ಇಟ್ಟುಕೊಂಡಿರುವುದಂತೂ ಸತ್ಯ. ಹಾಗಾಗಿ ಇಂಥದ್ದೊಂದು ಸುದ್ದಿಗೆ ರೆಕ್ಕೆಪುಕ್ಕಗಳು ಬಂದಿವೆ.
ಅಮಿತಾಭ್ ಮೊಮ್ಮಗ ಅಗಸ್ತ್ಯ (Agastya) ಹಾಗೂ ಶಾರುಖ್ ಖಾನ್ ಮಗಳು ಸುಹಾನಾ ಡೇಟಿಂಗ್ (Dating) ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಆದರೆ, ಅವರ ಪ್ರೇಮ ಮದುವೆಯವರೆಗೂ ಹೋಗಿದೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಪರಸ್ಪರ ಗೌರವ ಕೊಟ್ಟುಕೊಂಡು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೊಂದು ಗಟ್ಟಿ ಪ್ರೇಮವಾದ್ದರಿಂದ ಮದುವೆಯಾದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಿದೆ ಬಾಲಿವುಡ್. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ
ಸುಹಾನಾ ಮತ್ತು ಅಗಸ್ತ್ಯ ಅನೇಕ ಬಾರಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅನೇಕ ಸಮಾರಂಭಗಳಿಗೆ ಒಟ್ಟಿಗೆ ಹೋಗಿದ್ದಾರೆ. ಅಲ್ಲದೇ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾಗಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬೆಳೆಯುತ್ತಿದ್ದಾರೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಹಾಗಂತ ಇಬ್ಬರೂ ತಾವು ಡೇಟಿಂಗ್ ಮಾಡುತ್ತಿರುವ ವಿಚಾರವನ್ನೂ ಈವರೆಗೂ ಯಾವತ್ತೂ ಬಹಿರಂಗವಾಗಿ ಮಾತನಾಡಿಲ್ಲ.
ಈ ವಯಸ್ಸಿನ ಡೇಟಿಂಗ್ ತುಂಬಾ ದಿನ ಉಳಿಯುವುದಿಲ್ಲ ಎನ್ನುವ ಮಾತಿದೆ. ಹಲವಾರು ಪ್ರೇಮಿಗಳು ಅರ್ಧಕ್ಕೆ ಬಾಂಧವ್ಯವನ್ನು ತುಂಡರಿಸಿಕೊಂಡು ಹೋಗಿದ್ದಾರೆ. ಇವರಿಬ್ಬರ ಪ್ರೇಮವೂ ಹಾಗೆಯೇ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಏನೇ ಆಗಲಿ, ಅವರ ಪ್ರೇಮ ಗಟ್ಟಿಯಾಗಿ ಉಳಿದುಕೊಳ್ಳಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.