ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ನಟನೆಯ ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಹಾಡನ್ನು ವಿರೋಧಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಯೋಧ್ಯೆಯ (Ayodhya) ತಪಸ್ವಿ ಚಾವ್ನಿ ಮಠದ ಪರಮಹಂಸ ಆಚಾರ್ಯ (Paramahamsa Acharya) ಅವರು ಮಾತನಾಡಿ, ಶಾರುಖ್ ಖಾನ್ ನನ್ನ ಎದುರಿಗೆ ಸಿಕ್ಕರೆ ಜೀವಂತವಾಗಿ ಸುಟ್ಟು ಬಿಡುವೆ ಎಂದು ಗುಡುಗಿದ್ದಾರೆ. ಇಂತಹ ಹೇಳಿಕೆಯು ಆಘಾತಕಾರಿ ಆದಂಥದ್ದು ಎಂದು ಹಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಪ್ರತಿಭಟನೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಾಧು, ‘ಪಠಾಣ್ (Pathan) ಸಿನಿಮಾ ಸನಾತನ ಧರ್ಮಕ್ಕೆ ಅವಮಾನ ಮಾಡಿದೆ. ಸದ್ಯಕ್ಕೆ ಶಾರುಖ್ ಖಾನ್ ಅವರ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿದ್ದೇವೆ. ಒಂದು ವೇಳೆ ಅವರು ಏನಾದರೂ ನನ್ನ ಎದುರಿಗೆ ಬಂದರೆ ಜೀವಂತವಾಗಿ ಸುಡಲು ಹಿಂದುಮುಂದು ನೋಡುವುದಿಲ್ಲ. ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಬಿಡುವುದಿಲ್ಲ’ ಎಂದು ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಡೇಂಜರ್ ಝೋನ್‌ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್
ಏನೇ ಪ್ರತಿಭಟನೆ ಮಾಡಿದರೂ, ಸಿನಿಮಾ ತಂಡವಂತೂ ಸುಮ್ಮನೆ ಕೂತಿಲ್ಲ. ಸಿನಿಮಾದ ಎರಡನೇ ಹಾಡು ನಾಳೆ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಈ ಹಾಡಿನ ಒಂದೇ ಒಂದು ಫೋಟೋವನ್ನು ರಿಲೀಸ್ ಮಾಡಲಾಗಿದ್ದು, ದೀಪಿಕಾ ಪಡುಕೋಣೆ ಈ ಹಾಡಿನಲ್ಲೂ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲೂ ಅವರು ಗ್ಲಾಮರ್ ಗೆ ಯಾವುದೇ ಕೊರತೆಯನ್ನು ಮಾಡಿಲ್ಲ. ಹಾಗಾಗಿ ಈ ಹಾಡಿನ ಬಗ್ಗೆಯೂ ಅಷ್ಟೇ ನಿರೀಕ್ಷೆಯನ್ನು ಹೊಂದಲಾಗಿದೆ. ಈ ಹಾಡು ಯಾವ ರೀತಿಯಲ್ಲಿ ಮೂಡಿ ಬಂದಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.
ಪಠಾಣ್ ಸಿನಿಮಾದ ಎರಡನೇ ಹಾಡಾದ ‘ಜೂಮೇ ಜೋ ಪಠಾಣ್’ ನಾಳೆ ರಿಲೀಸ್ ಮಾಡುತ್ತಿರುವ ಕುರಿತು ನಿರ್ಮಾಣ ಸಂಸ್ಥೆಯು ವಿಷಯವನ್ನು ಹಂಚಿಕೊಂಡಿದ್ದು, ಈ ಹಾಡು ಕೂಡ ಸಖತ್ ಆಗಿಯೇ ಚರ್ಚೆ ಆಗಲಿದೆ ಎಂದು ಮೊದಲೇ ಹೇಳಿಕೊಂಡಿದೆ. ಹಾಗಾಗಿ ಮತ್ತೇನಾದರೂ ವಿವಾದಕ್ಕೆ ಕಾರಣವಾಗಿರುವ ಅಂಶಗಳು ಇರಬಹುದಾ ಎನ್ನುವ ಚರ್ಚೆ ಕೂಡ ನಡೆದಿದೆ. ಮೊದಲ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೂ, ಚಿತ್ರತಂಡ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ.