ಬಾಲಿವುಡ್ (Bollywood) ಸಿನಿಮಾ ರಂಗವನ್ನು ಐಸಿಯುನಿಂದ ಆಚೆ ತಂದ ಹೆಗ್ಗಳಿಕೆ ಪಠಾಣ್ (Pathan) ಸಿನಿಮಾಗೆ ಸಲ್ಲುತ್ತದೆ. ದಕ್ಷಿಣದ ಸಿನಿಮಾಗಳ ಹಾವಳಿಗೆ ತತ್ತರಿಸಿ ಹೋಗಿದ್ದ ಬಾಲಿವುಡ್, ಒಂದು ಗೆಲುವಿಗಾಗಿ ಕಾಯುತ್ತಿತ್ತು. ಆ ಗೆಲುವನ್ನು ಪಠಾಣ್ ಸಿನಿಮಾ ತಂದುಕೊಟ್ಟಿತು. ಜೊತೆಗೆ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಕೂಡ ಮಾಡಿತು. ಇದರ ಬೆನ್ನಲ್ಲೇ ಶಾರುಖ್ ಖಾನ್ (Shah Rukh Khan) ಪಡೆದ ಮೊತ್ತದ ಬಗ್ಗೆ ಚರ್ಚೆ ಶುರುವಾಗಿದೆ. ಭಾರೀ ಮೊತ್ತದ ಸಂಭಾವನೆಯನ್ನೇ (Remuneration) ಅವರು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಬಾಕ್ಸ್ ಆಫೀಸಿನ ಅನೇಕ ದಾಖಲೆಗಳನ್ನು ಪಠಾಣ್ ಮುರಿದಿದೆ. ಅತೀ ಕಡಿಮೆ ಸಮಯದಲ್ಲೇ ಸಾವಿರ ಕೋಟಿ ಸಂಪಾದನೆ ಮಾಡಿದ ಬಾಲಿವುಡ್ ಸಿನಿಮಾ ಎನ್ನುವ ಖ್ಯಾತಿಯೂ ಅದು ಪಾತ್ರವಾಗಿದೆ. ಅಲ್ಲದೇ, ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಮೂಲಕ ಏಕಕಾಲದಲ್ಲಿ ದೇಶ ವಿದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಚಿತ್ರಕಂಡಿದೆ. ನಿರ್ಮಾಣ ಸಂಸ್ಥೆಗೆ ಬರೋಬ್ಬರಿ 603 ಕೋಟಿ ಲಾಭವನ್ನು ತಂದುಕೊಟ್ಟಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ:ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ ಪ್ರಶಾಂತ್ ನೀಲ್ ಲಾಕ್?
Advertisement
Advertisement
ಈ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್ ಖರ್ಚು ಮಾಡಿದ್ದು 270 ಕೋಟಿ. ಥಿಯೇಟರ್ ನಿಂದಲೇ 941 ಕೋಟಿ ರೂಪಾಯಿ ಬಂದಿದೆ. ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳ ರೂಪದಲ್ಲಿ 150 ಕೋಟಿ ಬಾಚಿಕೊಂಡಿತ್ತು. ಹೀಗಾಗಿ ಭಾರೀ ಮೊತ್ತದ ವ್ಯಾಪಾರವನ್ನೇ ಈ ಸಿನಿಮಾ ಮಾಡಿತ್ತು. ಈ ಎಲ್ಲ ವ್ಯಾಪಾರದ ನಂತರ ಶೇರ್ ರೂಪದಲ್ಲಿ ಶಾರುಖ್ ಖಾನ್ ಗೆ 200 ಕೋಟಿ ರೂಪಾಯಿ ಸಂಭಾವನೆ ಹೋಗಿದೆಯಂತೆ.
Advertisement
ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ಟೀಕೆಗೆ ಪಠಾಣ್ ಗುರಿ ಆಯಿತು. ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದರು ಎನ್ನುವ ಕಾರಣಕ್ಕಾಗಿ ಪ್ರತಿಭಟನೆ ಕೂಡ ನಡೆಯಿತು. ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ಸಿನಿಮಾವನ್ನು ಬ್ಯಾನ್ ಮಾಡುವ ವಿಚಾರ ಮುನ್ನೆಲೆಗೆ ಬಂತು. ಈ ಸಿನಿಮಾದ ಬಗ್ಗೆ ಏನೂ ಮಾತನಾಡಬಾರದು ಎಂದು ಸ್ವತಃ ಪ್ರಧಾನಿ ಮೋದಿ ಅವರೇ ಕರೆಕೊಟ್ಟಿದ್ದರು. ಆದರೂ, ಪ್ರತಿಭಟನೆ ನಿಲ್ಲಲಿಲ್ಲ. ಸಿನಿಮಾ ಗೆಲ್ಲುವುದು ಮಾತ್ರ ಬಿಡಲಿಲ್ಲ.