ಶಾರುಖ್ ಖಾನ್ (Sharukh Khan) ನಟನೆಯ ಜವಾನ್ (Jawan Film) ಸಿನಿಮಾ ಇದೇ ಸೆ.7ರಂದು ತೆರೆಗೆ ಅಬ್ಬರಿಸಲು ಸಿದ್ಧವಾಗಿದೆ. ಬಿಡುಗಡೆಗೆ 2 ದಿನ ಬಾಕಿಯಿರುವಾಗಲೇ ಶಾರುಖ್ ಖಾನ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪಠಾಣ್ (Pathaan) ನಟನ ಭಕ್ತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಇತ್ತೀಚಿಗಷ್ಟೇ ವೈಷ್ಣೋದೇವಿ ದೇವಾಲಯಕ್ಕೆ ಶಾರುಖ್ & ಟೀಂ ಭೇಟಿ ನೀಡಿದ್ದರು. ನಯನತಾರಾ (Nayanatara) ಜೊತೆ ತಿರುಪತಿ(Tirupati) ತಿಮ್ಮಪ್ಪನ ದರ್ಶನವನ್ನ ನಟ ಪಡೆದಿದ್ದಾರೆ. ಈ ವೇಳೆ ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ಭಾಗಿಯಾಗಿದ್ದರು. ತಿಮ್ಮಪ್ಪನ ದರ್ಶನದ ಬಳಿಕ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಿಳಿ ಬಣ್ಣ ಪಂಚೆ ಶಲ್ಯ ಧರಿಸಿ ಶಾರುಖ್ ಮಿಂಚಿದ್ದಾರೆ.
ಪಠಾಣ್ ಅಂತೆಯೇ ಜವಾನ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯಲಿ ಎಂದು ಶಾರುಖ್ ಪಣ ತೊಟ್ಟಿದ್ದಾರೆ. ಸಿನಿಮಾ ಹಿಟ್ ಆಗಲೇಬೇಕು ಎಂದು ಭರ್ಜರಿಯಾಗಿ ಪ್ರಮೋಟ್ ಮಾಡ್ತಿದ್ದಾರೆ.
View this post on Instagram
ಜವಾನ್ ರಿಲೀಸ್ ದಿನ 85 ಸಾವಿರಕ್ಕೂ ಅಧಿಕ ಜನ ಅಭಿಮಾನಿಗಳು ಸೇರುತ್ತಿದ್ದಾರೆ. ಜವಾನ್ ಗೆಲುವನ್ನ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ಮಿಲಿಯನ್ ಗಡಿ ದಾಟಿದ ಸೋನು ಬಿಕಿನಿ ವಿಡಿಯೋ
ಶಾರುಖ್ ಖಾನ್‌ಗೆ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಹೀರೋ ಮುಂದೆ ವಿಜಯ್ ಸೇತುಪತಿ (Vijay Sethupathi) ಅಬ್ಬರಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಎಲ್ಲವೂ ಕಮಾಲ್ ಮಾಡಿದೆ. ಇದೇ ಸೆಪ್ಟೆಂಬರ್ 7ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]