ಬಾಲಿವುಡ್‌ನ (Bollywood) ಕಿಂಗ್ ಖಾನ್ ಶಾರುಖ್ (Sharukh Khan) ಪುತ್ರ ಆರ್ಯನ್ ಖಾನ್ (Aryan Khan) ಹೊಸ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶನ ಮಾಡುವುದಾಗಿ ಆರ್ಯನ್ ಗುಡ್ ನ್ಯೂಸ್ ಕೊಟ್ಟಿದ್ದರು. ಈ ಬೆನ್ನಲ್ಲೇ ಗೆಳೆಯರೊಟ್ಟಿಗೆ ಸೇರಿ ಹೊಸ ಉದ್ಯಮದತ್ತ ಆರ್ಯನ್ ಮುಖ ಮಾಡಿದ್ದಾರೆ.
ಡ್ರಗ್ಸ್ ಪ್ರಕರಣದ ನಂತರ ಬಹುತೇಕ ಸೈಲೆಂಟ್ ಆಗಿದ್ದ ಆರ್ಯನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ನಿರ್ದೇಶನ (Direction) ಕ್ಷೇತ್ರದಲ್ಲಿ ಕಾಲಿಟ್ಟ ಬೆನ್ನಲ್ಲೇ ವೋಡ್ಕಾ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಆರ್ಯನ್ ಖಾನ್ ಹಾಗೂ ಇನ್ನು ಕೆಲವರು ಸೇರಿಕೊಂಡು ಐಶಾರಾಮಿ ಫ್ಯಾಷನ್ ಬ್ರ‍್ಯಾಂಡ್ ಮತ್ತು ವೋಡ್ಕಾ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ತಂದಿದ್ದಾರೆ. ‘ಡಿ’ಯಾವೋಲ್’ ಹೆಸರಿನ ಬ್ರ‍್ಯಾಂಡ್ ಅನ್ನು ಆರ್ಯನ್ ಖಾನ್ ಹಾಗೂ ಗೆಳೆಯರು ಹೊರತಂದಿದ್ದು, ಈ ಬ್ರ‍್ಯಾಂಡ್ ಮೂಲಕ ಉತ್ತಮ ಗುಣಮಟ್ಟದ ಮದ್ಯ ವೋಡ್ಕಾ ಸೇರಿದಂತೆ ಇನ್ನೂ ಹಲವು ಫ್ಯಾಷನ್ ಸಾಮಗ್ರಿಗಳನ್ನು ಆರ್ಯನ್ ಮಾರಾಟ ಮಾಡಲಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಜೊತೆ ಡೇಟ್‌ಗೆ ಹೋಗುವ ಆಸೆಯನ್ನು ವ್ಯಕ್ತಪಡಿಸಿದ ನಟ ವಿಶಾಲ್
View this post on Instagram
ಆರ್ಯನ್ ಮದ್ಯ ಮಾರಾಟ ಮಾಡುತ್ತಿರೋದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಆಗಿ ಮದ್ಯ ಮಾರಾಟ ಮಾಡೋದು ತಪ್ಪು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.