ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ (Shah Rukh Khan) ವೃತ್ತಿಪರತೆವುಳ್ಳವರು ಎಂದು ಆಗಾಗ ಹೆಚ್ಚು ಸುದ್ದಿಯಾಗುತ್ತದೆ. ಇದೀಗ ಕಿಂಗ್ ಖಾನ್ ವೃತ್ತಿಪರತೆ ಇನ್ನಷ್ಟು ಮುನ್ನಲೆಗೆ ಬಂದಿದೆ. ಕಾರಣ ಸ್ವಂತ ಮಗಳು ಸಿನಿಮಾ ಸೆಟ್‍ನಲ್ಲಿದ್ದರೂ ಸಾವಿರಾರು ಕೋಟಿ ಒಡೆಯ ಶಾರುಖ್ ಖಾನ್ ಕೇವಲ ಸಹೋದ್ಯೋಗಿ ಥರ ನೋಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಹಿರಿಯ ನಟ ಸೌರಭ್ ಶುಕ್ಲಾ ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ `ಕಿಂಗ್’ ಸಿನಿಮಾ ಸೆಟ್‍ನಲ್ಲಾದ ಗೌಪ್ಯ ವಿಚಾರ ಬಿಚ್ಚಿಟ್ಟಿದ್ದಾರೆ.
ಶಾರುಖ್ ಖಾನ್ ತಮ್ಮದೇ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‍ಟೈನ್ಮೆಂಟ್ ಮೂಲಕ `ಕಿಂಗ್’ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನ ಪಠಾಣ್ ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿದ್ದು ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಸೇರಿದಂತೆ ಖ್ಯಾತ ಕಲಾವಿದರು ಅಭಿನಯಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ (Suhana Khan) ಕೂಡ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಸುಹಾನಾ ಕಾಣಿಸ್ಕೊಳ್ಳುತ್ತಿದ್ದು ಸ್ವಂತ ಮಗಳಾಗಿದ್ದರೂ ಆಕೆಯನ್ನು ಇತರ ಎಲ್ಲಾ ಸಹದ್ಯೋಗಿಗಳಂತೆ ಟ್ರೀಟ್ ಮಾಡುವ ರೀತಿಯೇ ಸಾಮಾನ್ಯರಂತೆ ನೋಡಲಾಗುತ್ತಿದೆ ಎಂದು ಈ ಚಿತ್ರದಲ್ಲಿ ನಟಿಸಿರುವ ಸೌರಭ್ ಶುಕ್ಲಾ ಹೇಳಿದ್ದಾರೆ. ಇದನ್ನೂ ಓದಿ: ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
ಶಾರುಖ್ ಖಾನ್ ಮುದ್ದಿನ ಮಗಳು ಸುಹಾನಾ ಖಾನ್ ಹಿಂದೆ ಸೆಲೆಬ್ರಿಟಿಗಳ ಮಕ್ಕಳು ಸೇರಿ ಅಭಿನಯಿಸಿದ್ದ ಆರ್ಚೀವ್ ಚಿತ್ರದಲ್ಲಿ ನಟಿಸಿದ್ದರು. `ಕಿಂಗ್’ ಸುಹಾನಾಗೆ ಮೊದಲ ಕಮರ್ಷಿಯಲ್ ಚಿತ್ರ. ತಮ್ಮದೇ ನಿರ್ಮಾಣ ಸಂಸ್ಥೆ, ತಂದೆಯೇ ಹೀರೋ ಆಗಿದ್ದರೂ ಸೆಟ್ಟಲ್ಲಿ ಸುಹಾನಾಗೆ ಸಾಮಾನ್ಯ ಕಲಾವಿದರಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನ ಸುಹಾನಾ ಪಡೆದುಕೊಳ್ಳುತ್ತಿದ್ದಾರಂತೆ. ಇದು ಶಾರುಖ್ ನಿರ್ಣಯವಾಗಿದ್ದು ಸುಹಾನಾಗೆ ಅಲ್ಲಿ ಯಾವುದೇ ಸ್ಪೆಷಲ್ ಟ್ರೀಟ್ಮೆಂಟ್ ನೀಡಬಾರದು ಎಂದು ತಾಕೀತು ಮಾಡಲಾಗಿದೆಯಂತೆ. ಹೀಗೆ ಮಗಳು ಸುಹಾನಾ ಖಾನ್ ಹಾಗೂ ತಂದೆ ಶಾರುಖ್ ಖಾನ್ ಸಾಮಾನ್ಯ ಸಹದ್ಯೋಗಿಗಳಾಗಿ `ಕಿಂಗ್’ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡ್ತಿರೋದು ವಿಶೇಷ. ಇದನ್ನೂ ಓದಿ: ಕೊಡಗಿನಲ್ಲಿ ರಶ್ಮಿಕಾ – ವಿಜಯ್ ಡಿನ್ನರ್ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!

