Connect with us

Bollywood

ಕೋಟ್ ಧರಿಸುತ್ತಿದ್ದ ವಿದ್ಯಾರ್ಥಿನಿ ಕೂದಲು ಸರಿಮಾಡಿದ ಶಾರುಖ್ – ವಿಡಿಯೋ ವೈರಲ್

Published

on

ಮುಂಬೈ: ಬಾಲಿವುಡ್ ಕಿಂಗ್‍ಖಾನ್ ಶಾರುಖ್ ಖಾನ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಕಾರ್ಯಕ್ರಮವೊಂದರ ವೇದಿಕೆ ಮೇಲೆ ವಿದ್ಯಾರ್ಥಿನಿಯ ಕೂದಲು ಸರಿಮಾಡಿ ಕೋಟ್ ಹಾಕಿಕೊಳ್ಳಲು ಶಾರುಖ್ ಸಹಾಯ ಮಾಡಿದ್ದು, ಅವರು ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ರೀತಿ ನೆಟ್ಟಿಗರ ಮನ ಗೆದ್ದಿದೆ.

ಇತ್ತೀಚೆಗೆ ಮುಂಬೈನ ಲಾ ಥ್ರೋಬ್ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗಿಯಾಗಿದ್ದರು. ಸ್ನಾತಕೋತ್ತರ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಗಿತ್ತು. ಸ್ನಾತಕೋತ್ತರ ವಿದ್ಯಾರ್ಥಿನಿ ಕೇರಳದ ಗೋಪಿಕಾಗೆ ಗೌರವಿಸುವ ವೇಳೆ ಶಾರುಖ್ ಆಕೆಗೆ ಕೋಟ್ ಹಾಕಿಕೊಳ್ಳಲು ಸಹಾಯ ಮಾಡಿದರು. ಅಷ್ಟೇ ಅಲ್ಲದೇ ಆಕೆಯ ಕೂದಲನ್ನು ಸರಿ ಮಾಡಿದರು. ಸ್ಟಾರ್ ನಟನಾಗಿದ್ದರೂ ಹಿಂಜರಿಯದೆ ವಿದ್ಯಾರ್ಥಿನಿಗೆ ಸಹಾಯ ಮಾಡಿದ ಶಾರುಖ್ ಕಾರ್ಯ ಅಭಿಮಾನಿಗಳ ಮನ ಗೆದ್ದಿದೆ. ಶಾರುಖ್ ವಿದ್ಯಾರ್ಥಿನಿಗೆ ಸಹಾಯ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಕಿಂಗ್‍ಖಾನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿದ್ಯಾರ್ಥಿ ವೇತನ ನೀಡಿ ಗೋಪಿಕಾಗೆ ಶಾರುಖ್ ಶುಭಹಾರೈಸಿದ್ದರು. ಗೋಪಿಕಾ ಪರಿಸರ ವಿಜ್ಞಾನ ವಿಷಯದಲ್ಲಿ ಸಂಶೋಧನೆ ಮಾಡುತ್ತಿರುವುದು ದೊಡ್ಡ ವಿಚಾರ. ಈ ಬಗ್ಗೆ ನನಗೆ ತಿಳಿದಿಲ್ಲ. ಅದನ್ನು ನಾನು ತಿಳಿದುಕೊಳ್ಳಲು ಹೋದರೆ ಅಷ್ಟೇ ಕಥೆ. ಆಕೆಗೆ ಒಳ್ಳೆಯದಾಗಲಿ ಎಂದು ಶುಭಕೋರಿದ್ದರು.

ಗೋಪಿಕಾಗೆ ಶಿಕ್ಷಣ ನೀಡುತ್ತಿರುವ ಅವರ ಕುಟುಂಬಕ್ಕೆ ಧನ್ಯವಾದ. ಶಿಕ್ಷಣಕ್ಕೆ ಅಂತ್ಯವಿಲ್ಲ, ಯಾವುದಾದರೂ ವಿಷಯಗಳ ಬಗ್ಗೆ ನಾವು ಕಲಿಯುತ್ತಲೇ ಇರುತ್ತೇವೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಅವರು ಸಬಲರಾಗುವಂತೆ ಮಾಡುವುದು ಮುಖ್ಯ. ಶಿಕ್ಷಣ ಕ್ಷೇತ್ರದಲ್ಲಿ ಭಾರತ ಮುಂದುವರಿಯುತ್ತಿದೆ ಎಂಬುದು ನನ್ನ ಅನಿಸಿಕೆ. ಗೋಪಿಕಾಳ ಆಸಕ್ತಿ ನಿಜಕ್ಕೂ ಮೆಚ್ಚುವಂತದ್ದು, ಈ ವಿದ್ಯಾರ್ಥಿ ವೇತನವು ಆಸ್ಟ್ರೇಲಿಯಾದ ಮೆಲ್ಬೋರ್ನ್‍ನಲ್ಲಿರುವ ಲಾ ಟ್ರೋಬ್‍ಗೆ ಪ್ರಯಾಣಿಸಲು ಗೋಪಿಕಾಗೆ ನೆರವಾಗುತ್ತೆ. ಅಲ್ಲಿ ಭಾರತದ ಕೃಷಿ ಕ್ಷೇತ್ರವನ್ನು ಸುಧಾರಿಸಿ, ಸಾಧನೆ ಮಾಡುವ ಆಕೆ ಕನಸು ನನಸಾಗಿಸಿಕೊಳ್ಳಲು ಅವಕಾಶ ದೊರೆಯುತ್ತದೆ ಎಂದು ಖಾರುಖ್ ಹೇಳಿದ್ದರು.

ಸದ್ಯ ಎಲ್ಲೆಡೆ ವೈರಲ್ ಆಗುತ್ತಿರುವ ಶಾರುಖ್ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿಂಗ್‍ಖಾನ್ ಹೆಣ್ಣುಮಕ್ಕಳ ಮೇಲಿಟ್ಟಿರುವ ಗೌರವ, ನಡೆಸಿಕೊಳ್ಳುವ ರೀತಿಗೆ ನೆಟ್ಟಿಗರು ಮನಸೋತ್ತಿದ್ದು, ನೀವು ಸೂಪರ್ ಶಾರುಖ್ ಎಂದು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *