ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ (Pathan) ಸಿನಿಮಾ ಬಾಲಿವುಡ್ ನಲ್ಲಿ ದಾಖಲೆ ಬರೆದಿದೆ. ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಬಿಟೌನ್ ಗೆ ಜೀವ ನೀಡಿದೆ. ಕಳೆದ ಎರಡ್ಮೂರು ವರ್ಷಗಳಿಂದ ಕುಸಿದು ಹೋಗಿದ್ದ ಬಾಲಿವುಡ್ ಶಕ್ತಿಗೆ ನವಚೈತನ್ಯ ಬಂದಿದೆ. ಹಾಗಾಗಿ ಶಾರುಖ್ ಖಾನ್ ಗೆ (Salman Khan) ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಶಾರುಖ್ ಇದ್ದರೆ ಸಿನಿಮಾ ಗೆಲ್ಲುವುದು ಗ್ಯಾರಂಟಿ ಎನ್ನುವ ಮಾತು ಶುರುವಾಗಿದೆ.
ಹಾಗಂತ ಪಠಾಣ್ ಸುಮ್ಮನೆ ಗೆದ್ದಿಲ್ಲ, ನಾನಾ ರೀತಿಯಲ್ಲಿ ಹೋರಾಟ ಮಾಡಿಯೇ ಇಷ್ಟು ದೊಡ್ಡ ಯಶಸ್ಸು ಪಡೆದಿದೆ. ಬಾಯ್ಕಾಟ್ ಅಭಿಯಾನದಿಂದ ಶುರುವಾದ ಹೋರಾಟ, ಚಿತ್ರಮಂದಿರದಲ್ಲಿ ಹಾಕಿದ್ದ ಪೋಸ್ಟರ್ ಕಿತ್ತು ಹಾಕುವತನಕ ಮುಂದುವರೆಯಿತು. ಸಿನಿಮಾವನ್ನು ಮಕಾಡೆ ಮಲಗಿಸಿಲ್ಲ ಅನೇಕ ಮಾರ್ಗಗಳನ್ನು ಹುಡುಕಿದರು. ಈ ಎಲ್ಲವನ್ನೂ ದಾಟಿಕೊಂಡು ಸಿನಿಮಾ ಗೆಲುವು ಸಾಧಿಸಿತು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ
ಹಾಗಾಗಿಯೇ ಸಲ್ಮಾನ್ ಖಾನ್ ತಮ್ಮ ಟೈಗರ್ 3 ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಬೇಕು ಎನ್ನುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಅದೊಂದು ಅತಿಥಿ ಪಾತ್ರವಾಗಿದ್ದರೂ, ಬಲು ಪ್ರೀತಿಯಿಂದಲೇ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರಂತೆ ಶಾರುಖ್. ಪಠಾಣ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೂಡ ಅತಿಥಿ ಪಾತ್ರ ಮಾಡಿದ್ದರು. ಆ ಋಣವನ್ನು ಈ ಸಿನಿಮಾದಲ್ಲಿ ತೀರಿಸಲಿದ್ದಾರೆ ಶಾರುಖ್.