ಡಂಕಿ ಸಿನಿಮಾ ರಿಲೀಸ್ ಬೆನ್ನಲ್ಲೇ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಟೆಂಪಲ್ ರನ್ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಶಾರುಖ್ ಜಮ್ಮುವಿನ ವೈಷ್ಣೋದೇವಿ ದೇವಾಲಯಕ್ಕೇ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಶಿರಡಿ (Shirdi) ಸಾಯಿಬಾಬ (Saibaba) ದೇವಸ್ಥಾನಕ್ಕೆ ಪುತ್ರಿಯೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ಶಾರುಖ್ ನಟನೆಯ ಚಿತ್ರಗಳು ಈ ವರ್ಷದಲ್ಲಿ ಬಾಕ್ಸ್ ಆಫೀಸಿನಲ್ಲಿ ಸಖತ್ ಕಮಾಯಿ ಮಾಡಿವೆ. ಸಾವಿರಾರು ಕೋಟಿ ರೂಪಾಯಿ ಗಳಿಸಿವೆ. ಡಂಕಿ ಸಿನಿಮಾದ ಮೇಲೂ ಅಷ್ಟೇ ನಿರೀಕ್ಷೆ ಮೂಡಿದ್ದು, ಹೀಗಾಗಿ ಶಾರುಖ್ ಖಾನ್ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ರಾಜಕುಮಾರ್ ಹಿರಾನಿ ಮತ್ತು ಶಾರುಖ್ ಕಾಂಬಿನೇಷನ್ ನ ಸಿನಿಮಾ ಡಂಕಿ. ಹಾಡು ಮತ್ತು ಟ್ರೈಲರ್ ನಿಂದಾಗಿ ಚಿತ್ರೋದ್ಯಮದಲ್ಲಿ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದ ಚಿತ್ರ. ಅಲ್ಲದೇ, ಸಲಾರ್ ಸಿನಿಮಾ ಕೂಡ ಅದೇ ಹೊತ್ತಿಗೆ ತೆರೆ ಕಾಣುವುದರಿಂದ ಸಖತ್ ಫೈಟ್ ಇರಲಿದೆ. ಈ ಹೋರಾಟದಲ್ಲಿ ಸಲಾರ್ ಗೆಲ್ಲುತ್ತಾ ಅಥವಾ ಡಂಕಿ ಗೆಲ್ಲುತ್ತಾ ಕಾದು ನೋಡಬೇಕು.