ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಶಾರುಖ್ ಖಾನ್

Public TV
1 Min Read
sharuk khan kkr

ಕೋಲ್ಕತ್ತಾ: ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಕೆಕೆಆರ್ ತಂಡದ ಮಾಲೀಕರಾಗಿರುವ ಶಾರುಖ್ ಖಾನ್ ಕೆಕೆಆರ್ ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.

ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ತಂಡ 102 ರನ್ ಗಳ ಭಾರೀ ಅಂತರದಲ್ಲಿ ಸೋಲುಂಡಿತ್ತು. ಈ ಕುರಿತು ಟ್ವೀಟ್ ಮಾಡಿರುವ ಶಾರುಖ್, ಕ್ರೀಡೆ ಎಂಬುವುದು ಸ್ಫೂರ್ತಿಯಾಗಿದ್ದು, ಇಲ್ಲಿ ಸೋಲು ಅಥವಾ ಗೆಲುವು ಸಾಮಾನ್ಯ. ಆದರೆ ತಂಡದಲ್ಲಿ ಇಂದು ಗೆಲುವಿನ ಸ್ಫೂರ್ತಿ ಕ್ಷೀಣಿಸಿದ್ದರಿಂದ ಮಾಲೀಕನಾಗಿ ತಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳಬೇಕಿದೆ ಎಂದು ಬರೆದುಕೊಂಡಿದ್ದಾರೆ.

ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮುಂಬೈ ನಾಲ್ಕನೇ ಸ್ಥಾನಕ್ಕೆ ಏರಿದೆ. ಕೊಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಮುಂಬೈ ಉತ್ತಮ ರನ್ ರೆಟ್ ನೊಂದಿಗೆ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ.

ಕೋಲ್ಕತ್ತಾ ತಂಡ ಕಳೆದ ಮೂರು ದಿನಗಳಲ್ಲಿ ಮುಂಬೈ ವಿರುದ್ಧ ಮುಖಾಮುಖಿ ಆದ ಎರಡು ಪಂದ್ಯಗಳಲ್ಲೂ ಸೋಲುಂಡಿದೆ. ಅಲ್ಲದೇ ಇದುವರೆಗೂ ಐಪಿಎಲ್ ನಲ್ಲಿ ಆಡಿರುವ 23 ಪಂದ್ಯಗಳಲ್ಲಿ 18 ರಲ್ಲಿ ಪಂದ್ಯದಲ್ಲಿ ಸೋತಿದೆ. ಇದರಲ್ಲಿ 8 ಪಂದ್ಯಗಳನ್ನು ಸತತವಾಗಿ ಸೋತಿರುವುದು ವಿಶೇಷವಾಗಿದೆ.

ಮುಂಬೈ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವ ಆಟಗಾರ ಈಶಾನ್ ಕಿಶಾನ್ ಕೇವಲ 21 ಎಸೆತಗಳಲ್ಲಿ 62 ರನ್(7 ಬೌಂಡರಿ, 6 ಸಿಕ್ಸರ್) ಸಿಡಿಸಿ ಮಿಂಚಿದ್ದರು. ಪಂದ್ಯದ ಬಳಿಕ ಮಾತನಾಡಿದ ಈಶಾನ್, ಯುವ ಆಟಗಾರರಿಗೆ ಟಾಪ್ ಆರ್ಡರ್ ನಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ತಂಡದ ನಾಯಕ ಹಾಗೂ ಮಾಲೀಕರ ಪ್ರೋತ್ಸಾಹ ಉತ್ತಮವಾಗಿದ್ದು, ತಾನು ಯಾವುದೇ ಆರ್ಡರ್ ನಲ್ಲಿ ಆಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

Ishan Kishan

Share This Article
Leave a Comment

Leave a Reply

Your email address will not be published. Required fields are marked *