ಮುಂಬೈ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾಗಿದ್ದರು. ಇದಾದ ಬಳಿಕ ಶಾರೂಖ್ ಖಾನ್ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದರು. ಇದೀಗ ಬಾಲಿವುಡ್ ಬಾದ್‌ಶಾ ಮತ್ತೆ ಸಾಮಾಜಿಕ ಮಾಧ್ಯಮಗಳಿಗೆ ಮರಳಿದ್ದಾರೆ.
ಶಾರೂಖ್ ಖಾನ್ ಬುಧವಾರ ಮಧ್ಯಾಹ್ನ ದೀರ್ಘ ವಿರಾಮದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದೂರದರ್ಶನ ಬ್ರ್ಯಾಂಡ್ ಒಂದರ ಜಾಹೀರಾತು ವೀಡಿಯೋವನ್ನು ಶಾರೂಖ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ
ಟಿವಿ ಜಾಹೀರಾತಿನಲ್ಲಿ ಶಾರೂಖ್ ರೊಂದಿಗೆ ಅವರ ಪತ್ನಿ ಗೌರಿ ಕೂಡಾ ಕಾಣಿಸಿಕೊಂಡಿದ್ದಾರೆ. ನಟ ಸಾಮಾಜಿಕ ಮಾಧ್ಯಮಕ್ಕೆ ಮತ್ತೆ ಮರಳಿ ಬಂದಿರುವುದರಿಂದ ಅವರ ಅಭಿಮಾನಿಗಳು ಶಾರೂಖ್‌ಗೆ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಅವರ ಅಭಿಮಾನಿಗಳು ಹೃದಯ ಎಮೋಜಿಗಳ ಸುರಿಮಳೆ ಹರಿಸಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಚೇತರಿಸಿಕೊಂಡು ಹಾಲಿಡೇ ಮೂಡಿನಲ್ಲಿ ಜಾನ್ವಿ