ನವದೆಹಲಿ: ತಂಬಾಕು (Tobacco) ಕಂಪನಿಗಳನ್ನು ಅನುಮೋದಿಸಿದ್ದಕ್ಕೆ ನಟರಾದ ಶಾರುಖ್ ಖಾನ್ (Shah Rukh Khan), ಅಕ್ಷಯ್ ಕುಮಾರ್ (Akshay Kumar) ಹಾಗೂ ಅಜಯ್ ದೇವಗನ್ (Ajay Devgn) ಅವರಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್ ನೀಡಿದೆ.
ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್ಬಿ ಪಾಂಡೆ ಅಕ್ಟೋಬರ್ 20 ರಂದು ತಂಬಾಕು ಕಂಪನಿಗಳನ್ನು ಅನುಮೋದಿಸಿದ್ದಕ್ಕಾಗಿ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಸಿಸಿಪಿಎ ನೋಟಿಸ್ ನೀಡಿದೆ ಎಂದು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠಕ್ಕೆ ತಿಳಿಸಿದ್ದಾರೆ.
Advertisement
Advertisement
ವಕೀಲ ಮೋತಿಲಾಲ್ ಯಾದವ್ ಅವರು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾದ ಕೆಲವು ಉತ್ಪನ್ನಗಳು, ವಸ್ತುಗಳ ಜಾಹೀರಾತುಗಳು ಅಥವಾ ಅನುಮೋದನೆಗಳಲ್ಲಿ ಸೆಲೆಬ್ರಿಟಿಗಳು, ವಿಶೇಷವಾಗಿ ಪದ್ಮ ಪ್ರಶಸ್ತಿ ಪುರಸ್ಕೃತರು ಭಾಗವಹಿಸುವ ಕುರಿತು ಸಮಸ್ಯೆಗಳನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಲೋಕ ಸಮರ ಗೆಲ್ಲಲು ಕಾಂಗ್ರೆಸ್ ತಯಾರಿ – 4 ಕ್ಷೇತ್ರದಲ್ಲಿ ನಿಲ್ತಾರಾ ಸೆಲೆಬ್ರಿಟಿ ಅಭ್ಯರ್ಥಿಗಳು?
Advertisement
ಸೆಪ್ಟೆಂಬರ್ 2022ರ ಆದೇಶವನ್ನು ಪಾಲಿಸದಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಿದ ಮನವಿಯಲ್ಲಿ ನ್ಯಾಯಾಲಯವು ಆಗಸ್ಟ್ 2023 ರಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ, ಮುಖ್ಯ ಆಯುಕ್ತರು ಮತ್ತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಇದರಲ್ಲಿ ಅರ್ಜಿದಾರರಿಗೆ ಭಾರತ ಸರ್ಕಾರವನ್ನು ಸಂಪರ್ಕಿಸಲು ತಿಳಿಸಲಾಗಿದೆ.
Advertisement
ನೋಟಿಸ್ಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್, ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಅಕ್ಟೋಬರ್ 20 ರಂದು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರ ಪೀಠಕ್ಕೆ ತಿಳಿಸಿದರು.
ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಒಪ್ಪಂದವನ್ನು ರದ್ದುಗೊಳಿಸಿದ್ದರೂ, ತಮ್ಮ ಜಾಹೀರಾತು ತೋರಿಸಿದ ತಂಬಾಕು ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು 2024ರ ಮೇ 9ಕ್ಕೆ ನಿಗದಿಪಡಿಸಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಇಂದು ಸುಪ್ರೀಂನಿಂದ ತೀರ್ಪು