ಸಿನಿಮಾ ಕಲಾವಿದರು ತಾವು ನಟಿಸುತ್ತಿರುವ ಪಾತ್ರಗಳಿಗೆ ತಕ್ಕಂತೆ ಹೇರ್ ಸ್ಟೈಲ್, ಬಾಡಿಲ್ಯಾಂಗ್ವೇಜ್, ದೇಹವನ್ನು ಸಣ್ಣ, ದಪ್ಪ ಮಾಡಿಕೊಳ್ಳುವ ಕಸರತ್ತು ಮಾಡುತ್ತಾರೆ. ಬಾಲಿವುಡ್ ನಟ ಶಾರೂಖ್ ಖಾನ್ ಕೂಡಾ ಅವರ ಮುಂದಿನ ಚಿತ್ರಕ್ಕಾಗಿ ಇಂಥದ್ದೆ ಕಸರತ್ತು ಮಾಡಿದ್ದಾರೆ.
Advertisement
ಶಾರೂಖ್ ಖಾನ್ ‘ಪಠಾಣ್’ ಸಿನಿಮಾ ಮೂಲಕ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಆ ಚಿತ್ರದ ಅವರ ಲುಕ್ ಈಗಾಗಲೇ ಬಹಿರಂಗವಾಗಿದ್ದು, ಅಭಿಮಾನಿಗಳು ಮಾತ್ರ ಶಾರೂಕ್ ಖಾನ್ ಅವರ ಹೊಸ ಸ್ಟೈಲ್‌ಗೆ ಫಿದಾ ಆಗಿದ್ದಾರೆ. ಇದನ್ನು ಓದಿ : ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ
Advertisement
Advertisement
56ನೇ ವಯಸ್ಸಿನಲ್ಲಿಯೂ ಶಾರೂಖ್ ಮಾಡುವ ಮೋಡಿ ಮಾತ್ರ, ಇನ್ನು 18ರ ಹರಯದೆ ಹುಡುಗರನ್ನು ಸೈಡ್ಲೈನ್ ಮಾಡುವುದರಲ್ಲಿ ಅನುಮಾನವೇ ಇಲ್ಲ ಎನ್ನವ ಮಾತುಗಳು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ ಶಾರೂಖ್ ಅವರು ಮಾಡಿದ್ದಾರೂ ಏನು? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
Advertisement
Shah Rukh agar thoda Rukh bhi gaya toh Pathaan ko kaise rokoge.. Apps aur Abs sab bana dalunga…. pic.twitter.com/vzk8C1JOUf
— Shah Rukh Khan (@iamsrk) March 26, 2022
ಶಾರೂಖ್ ಖಾನ್ ತಮ್ಮ ಹೊಸ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಒಂದು ವೇಳೆ ಸ್ವಲ್ಪವೇ ತಡ ಮಾಡಿದರೂ ಪಠಾಣ್ನನ್ನು ಹಿಡಿಯೋದು ಹೇಗೆ? ಆ್ಯಪ್ಸ್ ಮತ್ತು ಆ್ಯಬ್ಸ್ ಎಲ್ಲವನ್ನೂ ಮಾಡ್ತೀನಿ’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ 8 ಪ್ಯಾಕ್ಸ್ ಆ್ಯಬ್ಸ್ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನು ಕಂಡು ಶಾರೂಖ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಬಗೆಬಗೆಯಲ್ಲಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಬಾಲಿವುಡ್‌ನಲ್ಲಿ ‘ಪಠಾಣ್’ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಕೂಡ ಪಠಾಣ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದು, ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಪಠಾಣ್ ಸಿನಿಮಾದಲ್ಲಿ ಶಾರೂಖ್ ಖಾನ್ ಅವರ 8 ಪ್ಯಾಕ್ಸ್ ಅಭಿಮಾನಿಗಳಿಗೆ ಎಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎನ್ನುವುದನ್ನು ಕಾದುನೋಡಬೇಕಾಗಿದೆ.