ಬೆಂಗಳೂರು: ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನಾ ಎನ್‌ಕೆ ಶಾಫಿ ಸಅದಿ (Shafi Saadi) ರಾಜೀನಾಮೆ ನೀಡಿದ್ದಾರೆ. ಶಾಫಿ ಸಅದಿ ಅವರು ಇಂದು ರಾಜೀನಾಮೆ ನೀಡಿದ್ದು ಸರ್ಕಾರ ಅಂಗೀಕರಿಸಿದೆ.
ಶಾಫಿ ಸಅದಿ ಅವರನ್ನು ಬಿಜೆಪಿ ಸರ್ಕಾರದ (BJP Government) ನೇಮಿಸಿತ್ತು. ಕಾಂಗ್ರೆಸ್ ಸರ್ಕಾರ ಆಡಳಿತಕಕ್ಕೆ ಬಂದ ಬಳಿಕ ಮೌಲಾನಾ ಸಅದಿ ಮತ್ತು ಸದಸ್ಯರಾದ ಮೀರ್ ಅಜರ್ ಹುಸೇನ್, ಜಿ. ಯಾಕೂಬ್ ಮತ್ತು ಐಎಎಸ್ ಅಧಿಕಾರಿ ಜೆಹೆರಾ ನಸೀಮ್ ಅವರ ನಾಮನಿರ್ದೇಶನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ರಾಜ್ಯ ಸರ್ಕಾರವು ಮೇ 22 ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಒಂದೇ ದಿನ ಈ ಆದೇಶವನ್ನು ರದ್ದುಗೊಳಿಸಿತ್ತು. ಇದನ್ನೂ ಓದಿ: ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಬೀದಿಗಿಳಿಯುತ್ತೇವೆ: ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಎಚ್ಚರಿಕೆ
Advertisement
Advertisement
ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮೌಲಾನಾ ಸಅದಿ ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಮುಸ್ಲಿಂ ಸಮುದಾಯದ ವ್ಯಕ್ತಿಗೆ ನೀಡಬೇಕು ಎಂದು ಒತ್ತಾಯಿಸಿದ್ದರು.
Advertisement
Web Stories