ಮುಂಬೈ: ಎರಡೇ ಪಂದ್ಯವಾಡಿದರೂ 21 ವರ್ಷದ ಶಫಾಲಿ ವರ್ಮಾ (Shafali Verma) ವಿಶ್ವಕಪ್ ಫೈನಲಿನಲ್ಲಿ ಭಾರತ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ವಿರುದ್ಧದ ಫೈನಲಿನ ಅತ್ಯುತ್ತಮ ಆಟಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.
ಹೌದು. ಆಗಸ್ಟ್‌ನಲ್ಲಿ ಭಾರತ (Team India) ತಂಡ ಆಯ್ಕೆ ಮಾಡುವ ಶಫಾಲಿ ವರ್ಮಾ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಆದರೆ ಭಾರತದ ಯುವ ಓಪನರ್ ಪ್ರತಿಕಾ ರಾವಲ್ ಬಾಂಗ್ಲಾದೇಶದ ವಿರುದ್ಧ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಇದನ್ನೂ ಓದಿ: CWC 2025 | ಪಂದ್ಯದ ಗತಿ ಬದಲಿಸಿದ 42ನೇ ಓವರ್ ಮತ್ತು ಆ ಒಂದು ಕ್ಯಾಚ್!
What a moment! 😍🤩👌🏻#HarmanpreetKaur introduced #ShafaliVerma into bowling & she gets the wicket of Luus! 🫡👏🏻#CWC25 Final 👉 #INDvSA, LIVE NOW 👉 https://t.co/gGh9yFhTix pic.twitter.com/8rsuBlFd78
— Star Sports (@StarSportsIndia) November 2, 2025
ಪ್ರತಿಕಾ ರಾವಲ್ ಗಾಯಕ್ಕೆ ತುತ್ತಾದ ಬೆನ್ನಲ್ಲೇ ಆರಂಭಿಕ ಆಟಗಾರ್ತಿಯಾಗಿ ಶಫಾಲಿ ವರ್ಮಾಗೆ ಅವಕಾಶ ಸಿಕ್ಕಿತ್ತು. ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 10 ರನ್‌ಗಳಿಗೆ ಶಫಾಲಿ ವರ್ಮಾ ವಿಕೆಟ್ ಒಪ್ಪಿಸಿದರೂ ಫೈನಲ್‌ನಲ್ಲಿ ಸ್ಮೃತಿ ಮಂಧಾನ ಜೊತೆ ಶತಕದ ಜೊತೆಯಾಟವಾಡಿದ್ದರು. ಇವರಿಬ್ಬರು 106 ಎಸೆತಗಳಲ್ಲಿ 104 ರನ್ ಜೊತೆಯಾಟವಾಟಿ ಭದ್ರವಾದದ ಇನ್ನಿಂಗ್ಸ್ ಕಟ್ಟಿದ್ದರು. ಇದನ್ನೂ ಓದಿ: ಕೊನೆಗೂ ಕನಸು ನನಸು – ಭಾರತ ಈಗ ವಿಶ್ವ ಮಹಿಳಾ ಕ್ರಿಕೆಟಿಗೆ ಬಾಸ್

