LatestChikkaballapurDistrictsKarnataka

ಅಯ್ಯಪ್ಪನ ದರ್ಶನ ಪಡೆದು ವಾಪಸ್ಸಾಗುವಾಗ ಅಪಘಾತ – ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ: ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ತೆರಳಿ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ.

ಅಪಘಾತದಲ್ಲಿ ತಲೆಗೆ ಗಂಭೀರವಾದ ಗಾಯವಾಗಿದ್ದ ಪರಿಣಾಮ ರವೀಂದ್ರ(52) ಮೃತಪಟ್ಟಿದ್ದಾರೆ. ಸಂಜಯ್(38), ಪ್ರವೀಣ್ (30), ಮಹೇಂದ್ರ (30) ಹಾಗೂ ಅನಿಲ್ (28) ಗಾಯಗೊಂಡಿದ್ದು, ದೇವನಹಳ್ಳಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ckb accident 1

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಆವತಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಅಪಘಾತ ಸಂಭವಿಸಿದೆ. ಆವತಿ ಮೇಲ್ಸೆತುವೆ ಮೇಲಿಂದ ಕೆಳಗೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬಿಟ್ಟು ರಸ್ತೆಯ ಎಡಬದಿಗೆ ನುಗ್ಗಿದೆ.

ಈ ವೇಳೆ ಹೆದ್ದಾರಿಯಿಂದ 100 ಮೀಟರ್ ದೂರ ಸಾಗಿರುವ ಕಾರು ಮರಗಳಿಗೆ ಡಿಕ್ಕಿ ಹೊಡೆದು ಮುನ್ನುಗಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದವರು ತೆಲಂಗಾಣದ ಹೈದರಾಬಾದ್ ಮೂಲದವರು ಎಂದು ತಿಳಿದುಬಂದಿದೆ.

ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *