Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: PublicTV Explainer: ಕ್ರಿಕೆಟ್ ಅಕಾಡೆಮಿಗಳ ಗೇಮ್‌ ಚೇಂಜರ್‌ ಲೆದರೆಟ್ ಬಾಲ್! 
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | PublicTV Explainer: ಕ್ರಿಕೆಟ್ ಅಕಾಡೆಮಿಗಳ ಗೇಮ್‌ ಚೇಂಜರ್‌ ಲೆದರೆಟ್ ಬಾಲ್! 

Cricket

PublicTV Explainer: ಕ್ರಿಕೆಟ್ ಅಕಾಡೆಮಿಗಳ ಗೇಮ್‌ ಚೇಂಜರ್‌ ಲೆದರೆಟ್ ಬಾಲ್! 

Public TV
Last updated: February 7, 2026 7:32 pm
Public TV
Share
3 Min Read
SG 50 Ball
SHARE

50 ಓವರ್‌ಗಳ ಒಳಗೆ ಬಣ್ಣ ಕಳೆದುಕೊಂಡು ಹಾನಿಗೊಳಗಾಗುವ ಸಾಮಾನ್ಯ ಲೆದರ್‌ ಬಾಲ್‌ಗಳಿಗೆ ಬದಲಾಗಿ ಹೊಸದಾಗಿ ಬಂದ ಲೆದರೆಟ್ ಬಾಲ್ (Leatherette Ball) ಕ್ರಿಕೆಟ್ ಅಕಾಡೆಮಿಗಳಿಗೆ (Cricket Academies) ವರದಾನವಾಗಲಿವೆ ಎಂ‌ಬ ಬಗ್ಗೆ ಕ್ರಿಕೆಟ್‌ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಕಡಿಮೆ ಬೆಲೆಯ ದೀರ್ಘ ಕಾಲ ಬಾಳಿಕೆ ಬರುವ, ತರಬೇತಿಗೆ ಸೂಕ್ತವಾದ ಲೆದರೆಟ್ ಬಾಲ್‌ಗಳು ಕ್ರಿಕೆಟ್ ಅಕಾಡೆಮಿಗಳ ಲಾಭ ಹೆಚ್ಚಿಸಲಿವೆಯೇ? ಎಂಬ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. 

ಏನಿದು ಲೆದರೆಟ್ ಬಾಲ್‌?
ಲೆದರೇಟ್‌ (Synthetic Leather) ಬಾಲ್‌ಗಳು ಸಾಂಪ್ರದಾಯಿಕ ಲೆದರ್‌ ಬಾಲ್‌ಗಳಿಗಿಂತಲೂ ಹೆಚ್ಚಿನ ಬಾಳಿಕೆ ಬರುವ ಚೆಂಡುಗಳಾಗಿವೆ. ಇವು 50 ಓವರ್‌ಗಳವರೆಗೆ ಆಕಾರವನ್ನು ಕಳೆದುಕೊಳ್ಳದೆ, ಸ್ಥಿರವಾದ ಬೌನ್ಸ್ ಮತ್ತು ಸ್ವಿಂಗ್ ಆಗುತ್ತವೆ. ವಿಶೇಷವಾಗಿ ಕ್ರಿಕೆಟ್ ಅಕಾಡೆಮಿಗಳು ಮತ್ತು ತರಬೇತಿಗಾಗಿ ವಿನ್ಯಾಸಗೊಳಿಸಲಾದ ಈ ಚೆಂಡುಗಳು ವಾಟರ್‌ ಪ್ರೂಫ್‌ ಆಗಿದ್ದು, ದೀರ್ಘ ಕಾಲ ಬಾಳಿಕೆ ಬರುತ್ತವೆ. ಅಲ್ಲದೇ ಬಣ್ಣವನ್ನು ಕಳೆದು ಕೊಳ್ಳದೇ ಸದಾ ಹೊಸ ಬಾಲ್‌ಗಳಂತೆಯೇ ಮಿಂಚಲಿವೆ. ಭಾರತದಲ್ಲಿನ 15,000ಕ್ಕೂ ಹೆಚ್ಚು ಕ್ರಿಕೆಟ್ ಅಕಾಡೆಮಿಗಳಿಗಾಗಿ ವಿಶೇಷವಾಗಿ ಈ ಬಾಲ್‌ ತಯಾರಿಸಲಾಗಿದೆ. 

ಕೈಗೆಟುಕುವ ಬೆಲೆ: ಇವುಗಳ ಬೆಲೆ ಸಾಮಾನ್ಯವಾಗಿ 450 ರೂ. – 500 ರೂ. ಇದೆ. ಇದು ಕ್ರಿಕೆಟ್‌ ಅಕಾಡೆಮಿಗಳಿಗೆ ಆರ್ಥಿಕವಾಗಿ ಲಾಭದಾಯಕವಾಗಿದೆ. ಇದೆ ಬೆಲೆಗೆ ಲೆದರ್‌ ಬಾಲ್‌ಗಳು ಲಭ್ಯವಿದ್ದರೂ ಅದರ ಬಾಳಿಕೆ ಹಾಗೂ ಬಣ್ಣ ದೀರ್ಘಕಾಲದವರೆಗೂ ಉಳಿಯುವುದಿಲ್ಲ. 

Leatherette Ball

ಪೆಟಾ ಪ್ರಮಾಣೀಕೃತ: ಲೆದರೇಟ್‌ ಬಾಲ್‌ಗಳನ್ನು ಪೆಟಾ (PETA) ಪ್ರಮಾಣೀಕರಿಸಿದೆ. ಬಿಳಿ (White) ಮತ್ತು ಕೆಂಪು (Red) ಬಣ್ಣಗಳಲ್ಲಿ ಲಭ್ಯವಿರುವ ಈ ಬಾಲ್‌ಗಳು ತರಬೇತಿ, ನೆಟ್ ಪ್ರಾಕ್ಟೀಸ್ ಮತ್ತು ಕ್ಲಬ್ ಪಂದ್ಯಗಳಿಗೆ ಅತ್ಯುತ್ತಮವಾಗಿವೆ. ಹೊಲಿಗೆ ಮತ್ತು ಆಕಾರದಲ್ಲಿ ಲೆದರ್‌ ಬಾಲ್‌ನ್ನೇ ಹೋಲುತ್ತವೆ. 

ಲೆದರೆಟ್ ಬಾಲ್‌ಗಳ ಆವಿಷ್ಕಾರ ಆಗಿದ್ದು ಹೇಗೆ?
2022 ರಲ್ಲಿ ಮೀರತ್‌ನಲ್ಲಿ ಮಾಲಿನ್ಯಕ್ಕೆ ಕಾರಣವಾದ  ಚರ್ಮದ ಫ್ಯಾಕ್ಟರಿಗಳನ್ನು ಮುಚ್ಚಲಾಯಿತು. ಇದರಿಂದ ಭಾರತ ಮೂಲದ ಬಾಲ್‌ ತಯಾರಕ ಕಂಪನಿ ಎಸ್‌ಜಿಗೆ ಕಚ್ಚಾ ವಸ್ತುಗಳ ಪೂರೈಕೆ ಸಮಸ್ಯೆ ಎದುರಾಯಿತು. ಇದೇ ಸಮಯದಲ್ಲಿ ಕ್ರಿಕೆಟ್‌ ಅಕಾಡೆಮಿಗಳಿಗೆ ಬಾಲ್‌ಗಳ ಹೆಚ್ಚಿನ ಬೇಡಿಕೆ ಸಹ ಇರುತ್ತದೆ. ಇದರ ನಡುವೆಯೇ ಹೊಸ ಬಗೆಯ ಬಾಲ್‌ಗಳನ್ನು ಪೂರೈಸಲು ಕಂಪನಿ ಮುಂದಾಗುತ್ತದೆ. 

ಕಚ್ಚಾ ಸಾಮಗ್ರಿ ಇಲ್ಲದಿದ್ದರೂ ಚೆಂಡುಗಳನ್ನು ಹೇಗೆ ಉತ್ಪಾದಿಸುತ್ತೇವೆ ಎಂಬ ಬಗ್ಗೆ ಎಸ್‌ಜಿ ಕಂಪನಿಯ ಸಿಇಒ ಪರಾಸ್ ಆನಂದ್ ಈ ವೇಳೆ ವಿವರಿಸಿದ್ದರು. ಅದರಂತೆ, ಭಾರತದಲ್ಲಿ ವಾರ್ಷಿಕವಾಗಿ ಲೆದರ್‌ ಚೆಂಡುಗಳು ಅಕಾಡೆಮಿ ಬಳಕೆ ಸುಮಾರು ನಾಲ್ಕು ಮಿಲಿಯನ್‌ಗಳಷ್ಟಿದೆ. ಲೆದರ್‌ ಬಾಲ್‌ಗಳ ದರ 6% ರಿಂದ 7% ಏರಿಕೆಯಾಗುತ್ತಿದೆ. ಇದೇ ವೇಳೆ ಆಕಾರ ಕಳೆದುಕೊಳ್ಳದ, ಸುಲಭವಾಗಿ ಬಣ್ಣ ಕಳೆದುಕೊಳ್ಳದ ದೀರ್ಘ ಬಾಳಿಕೆ ಬರುವ ಚೆಂಡುನ್ನು ಕ್ರಿಕೆಟ್‌ ಅಕಾಡೆಮಿಗಳಿಗೆ ಕಂಪನಿ ನೀಡಲು ಯೋಜನೆ ರೂಪಿಸಿದೆ ಎಂದು ಘೋಷಿಸಿದ್ದರು. 

ತಯಾರಿಕಾ ಪ್ರಕ್ರಿಯೆ
ಹಲವು ತಿಂಗಳುಗಳ ಪ್ರಯೋಗದ ನಂತರ ಪಾಲಿಯುರೆಥೇನ್ (ಪಿಯು) ಮಿಶ್ರಣ ಬಳಸಿಕೊಂಡು ಚೆಂಡಿನ ಹೊರ ಮೇಲ್ಮೈ ರಚಿಸಲಾಯಿತು. ಈ ಪ್ರಕ್ರಿಯೆಯನ್ನು ಥರ್ಮೋಫಾರ್ಮಿಂಗ್ ಎಂದು ಕರೆಯಲಾಗುತ್ತದೆ.

Leatherette Ball 1

ಇದನ್ನು ಕಾರುಗಳ ಒಳಗಿನ ಭಾಗಗಳನ್ನು ತಯಾರಿಸಲು ಬಳಸಲಾಗುತ್ತದೆ. ಚೆಂಡಿನ ನಿರ್ಮಾಣ ಲೆದರ್‌ ಬಾಲ್‌ನಂತೆಯೇ ಇರುತ್ತದೆ. ಲೆದರ್‌ ಬಾಲ್‌ನಂತೆ ಕಾರ್ಕ್-ವುಡ್ ಕೋರ್‌ನ್ನು ಹೊಂದಿದೆ. ಬಾಲ್‌ಗೆ ಹೊಲಿಗೆಯನ್ನು ಯಂತ್ರದಿಂದ ಮಾಡಲಾಗುತ್ತದೆ. ಇವುಗಳ ಸವೆತ ನಿರೋಧಕತೆ  ಚರ್ಮಕ್ಕಿಂತ ಹೆಚ್ಚಾಗಿದೆ. ಅದಕ್ಕಾಗಿಯೇ ಇದು ಲೆದರ್‌ ಬಾಲ್‌ಗಿಂತ ಹೆಚ್ಚು ಬಾಳಿಕೆ ಬರುತ್ತದೆ. ಇನ್ನೂ ಕಂಪನಿಗೆ ಸೂಪರ್ 50 ಬಾಲ್‌ಗಾಗಿ ಪೇಟೆಂಟ್ ಪಡೆದಿದೆ.

ವೇಗ ಕಳೆದುಕೊಳ್ಳದ ಲೆದರೆಟ್ ಬಾಲ್‌
ಅಕಾಡೆಮಿ ತರಬೇತುದಾರರು ದೀರ್ಘಕಾಲ ಬಾಳಿಕೆ ಬರುವ ಚೆಂಡಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಇದು ಅವರಿಗೆ ಸಾಕಷ್ಟು ಹಣ ಉಳಿಸಲು ಸಹಾಯ ಮಾಡುತ್ತದೆ. ಈ ಚೆಂಡು ಇಬ್ಬನಿಯಿಂದ ಸಮಸ್ಯೆಗೊಳಗಾಗುವುದಿಲ್ಲ. ಅಲ್ಲದೇ ಬೌಲಿಂಗ್ ಮಾಡಿದ ನಂತರ ಲೆದರ್ ಚೆಂಡಿನಷ್ಟು ವೇಗವನ್ನು ಕಳೆದುಕೊಳ್ಳದ ಕಾರಣ ಬ್ಯಾಟ್ಸ್‌ಮನ್‌ಗಳು ವೇಗದ ಬೌಲಿಂಗ್‌ಗೆ ಉತ್ತಮವಾಗಿ ತಯಾರಾಗಬಹುದು.

rahul dravid

ರಾಹುಲ್ ದ್ರಾವಿಡ್ ಪಾತ್ರ
ಭಾರತದ ಮಾಜಿ ಕ್ರಿಕೆಟಿಗ ದ್ರಾವಿಡ್ ಎಸ್‌ಜಿ ಕಂಪನಿ ಜೊತೆ ದೀರ್ಘ ಕಾಲದ ಸಂಬಂಧ ಹೊಂದಿದ್ದಾರೆ. ಮೊದಲಿಗೆ ಬಾಲ್‌ ತಯಾರದ ಬಳಿಕ ದ್ರಾವಿಡ್‌ ಅದರ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದರು. “ಇದು ಪ್ಲಾಸ್ಟಿಕ್‌ನಂತೆ ಕಾಣುತ್ತದೆ. ಅದು ಕೈ ಮತ್ತು ಬ್ಯಾಟ್ ಮುರಿಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದರು. 

ದ್ರಾವಿಡ್ ಸಲಹೆ ಬಳಿಕ ಬಾಲ್‌ನ ಸೂತ್ರೀಕರಣವನ್ನು  (ಹೊರ ಮೇಲ್ಮೈ) ಬದಲಾಯಿಸಲಾಗಿತ್ತು. ಇದರಿಂದ ಸ್ವಲ್ಪ ವೆಚ್ಚ ಹೆಚ್ಚಾಯಿತು. ಆದರೆ ಅಂತಿಮವಾಗಿ ಉತ್ತಮವಾಗಿದೆ ಬಾಲ್‌ ತಯಾರಾಯಿತು ಎನ್ನುತ್ತದೆ ಕಂಪನಿ. 

TAGGED:cricketCricket AcademiesLeatherette BallSuper 50 Ball
Share This Article
Facebook Whatsapp Whatsapp Telegram

Cinema news

Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World
Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National
Ranveer Singh Rishab Shetty Kantara
ʻಕಾಂತಾರʼ ದೈವ ನಿಂದಿಸಿದ್ದ ರಣವೀರ್‌ಗೆ ಪಾಪಪ್ರಜ್ಞೆ – ಚಾಮುಂಡಿ ದೇಗುಲದಲ್ಲೇ ಕ್ಷಮೆ ಕೇಳಲು ನಿರ್ಧಾರ
Cinema Districts Karnataka Latest National Sandalwood South cinema Top Stories

You Might Also Like

RG Kar Medical College Victims mother
Latest

ಆರ್‌ಜಿ ಕರ್ ಕಾಲೇಜಿನಲ್ಲಿ ಅತ್ಯಾಚಾರ & ಕೊಲೆ ಪ್ರಕರಣ – ಸಂತ್ರಸ್ತೆ ತಾಯಿಗೆ ಬಿಜೆಪಿ ಟಿಕೆಟ್

Public TV
By Public TV
12 minutes ago
Hailstones thunder and lightning heavy rain in Shivamogga 3
Bagalkot

ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ ಸಾಧ್ಯತೆ

Public TV
By Public TV
23 minutes ago
Hubballi Fighter Jet
Dharwad

ಹುಬ್ಬಳ್ಳಿಯಲ್ಲಿ 3 ಯುದ್ಧ ವಿಮಾನಗಳ ಹಾರಾಟ – ಆತಂಕಕ್ಕೊಳಗಾದ ಜನ

Public TV
By Public TV
1 hour ago
Andhra pradesh
Latest

Andhra Pradesh | ಟಿಪ್ಪರ್‌ಗೆ ಬಸ್‌ ಡಿಕ್ಕಿ – 12 ಮಂದಿ ಸಜೀವ ದಹನ; ಸುಟ್ಟು ಬೂದಿಯಾದ ಬಸ್‌

Public TV
By Public TV
2 hours ago
Petrol Bunk 1
Chikkaballapur

ಚಿಕ್ಕಬಳ್ಳಾಪುರ | ಪೆಟ್ರೋಲ್‌ ದರ 5 ರೂ., ಡೀಸೆಲ್‌ ಬೆಲೆ 3 ರೂ. ಏರಿಕೆ

Public TV
By Public TV
2 hours ago
Hormuz
Latest

ಗುಡ್‌ ನ್ಯೂಸ್‌ – ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿ ಓಪನ್‌: ಇರಾನ್‌

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?