ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut), ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಪೋಸ್ಟ್ ಹಾಕಿ ಬೆಂಕಿ ಹಾಕುತ್ತಲೇ ಇರುತ್ತಾರೆ. ಒಂದೊಂದು ಸಲ ಆ ಬೆಂಕಿ ಯಾರಿಗೋ ತಟ್ಟುತ್ತದೆ. ಮತ್ತೊಂದು ಸಾರಿ ತಟ್ಟದೇ ಆರುತ್ತದೆ. ಈ ಬಾರಿಯೂ ಟ್ವಿಟರ್ (Twitter) ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿರುವ ಅವರು, ಅದನ್ನು ಯಾರಿಗೆ ಹೇಳಿದ್ದಾರೆ ಎನ್ನುವುದನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದಾರೆ.
ಕೆಲವು ವಿಚಾರಗಳಲ್ಲಿ ಕಂಗನಾ ರಣಾವತ್ ನೇರ, ದಿಟ್ಟ. ಯಾರಿಗೆ ತಮ್ಮ ಮಾತು ತಲುಪಬೇಕಿತ್ತೋ ಅದನ್ನು ನೇರವಾಗಿಯೇ ತಲುಪಿಸುತ್ತಾರೆ. ಅದರಲ್ಲೂ ಕರಣ್ ಜೋಹಾರ್ ಬಗ್ಗೆ ನೇರವಾಗಿಯೇ ರಣಕಣಕ್ಕೆ ಆಹ್ವಾನಿಸುತ್ತಾರೆ. ಆದರೆ, ಕೆಲವರ ವಿಚಾರದಲ್ಲಿ ಪರೋಕ್ಷವಾಗಿ ವಿಷಯ ಪ್ರಸ್ತಾಪ ಮಾಡುತ್ತಾರೆ. ಹಾಗಾಗಿ ಇವತ್ತು ಬರೆದ ಬೆಡ್, ಹಾಸಿಗೆ, ಲೈಂಗಿಕ ವಿಚಾರ ಯಾರ ಮೇಲಿನ ಪ್ರಸ್ತಾಪ ಎನ್ನುವುದು ಗೊತ್ತಾಗಿಲ್ಲ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ
ಹೆಣ್ಣು (Female) ಗಂಡು (Male) ತಾರತಮ್ಯದ ಬಗ್ಗೆಯೂ ಮಾತನಾಡಿದ ಅವರು, ನಮ್ಮ ವೃತ್ತಿಯ ಮೇಲೆಯೇ ನಮ್ಮ ಐಡೆಂಟಿಟಿ ನಿರ್ಧಾರವಾಗುತ್ತದೆ. ಯಾರೂ ಈಗ ನಟಿ, ನಿರ್ದೇಶಕಿ ಎಂದು ಕರೆಯುವುದಿಲ್ಲ. ಕಲಾವಿದರು ಮತ್ತು ನಿರ್ದೇಶಕರು ಎನ್ನುತ್ತಾರೆ. ಜಗತ್ತು ನೀವು ಏನು ಮಾಡುತ್ತೀರಿ ಎನ್ನುವುದರ ಮೇಲೆ ನಿಮ್ಮನ್ನು ನಿರ್ಧರಿಸುತ್ತದೆ ಹೊರತು, ನೀವು ಬೆಡ್ ಮೇಲೆ ಏನು ಮಾಡಿದ್ದೀರಿ ಎನ್ನುವುದರ ಮೇಲಲ್ಲ’ ಎಂದು ಬರೆದುಕೊಂಡಿದ್ದಾರೆ.
ಲೈಂಗಿಕ ಆದ್ಯತೆಗಳು ಅವು ಕೇವಲ ಹಾಸಿಗೆಗೆ ಮಾತ್ರ ಸೀಮಿತವಾಗಿರಲಿ. ಅದೇ ನಿಮ್ಮ ಗುರುತಾಗಬಾರದು ಎಂದು ಮಾರ್ಮಿಕವಾಗಿ ಕಂಗನಾ ಬರೆದುಕೊಂಡಿದ್ದಾರೆ. ಈ ಕುರಿತಂತೆ ಹಲವರು ಹಲವು ರೀತಿಯಲ್ಲಿ ಕಂಗನಾಗೆ ಪ್ರಶ್ನೆ ಮಾಡಿದ್ದಾರೆ. ಏನನ್ನು ನೀವು ನೇರವಾಗಿ ಹೇಳುವುದಕ್ಕೆ ಹೊರಟಿದ್ದೀರೋ, ಅದನ್ನು ನೇರವಾಗಿ ಹೇಳಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.