ವೈದ್ಯೆಗೆ ಕಿರುಕುಳ- ಪೇದೆ ಅಮಾನತಿಗೆ ಅಧಿಕಾರ ಸ್ವೀಕರಿಸಿದ 2 ದಿನದಲ್ಲೇ ಅಣ್ಣಾಮಲೈ ಆದೇಶ

Public TV
1 Min Read
dcp annamalai 2 e1559031653893

ಬೆಂಗಳೂರು: ಡೆಂಟಲ್ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸ್ ಪೇದೆ ಸುದರ್ಶನ್ ಆಸ್ಕಿನ್ ನನ್ನು ಅಮಾನತು ಮಾಡುವಂತೆ ದಕ್ಷಿಣ ವಲಯ ಡಿಸಿಪಿ ಕೆ.ಅಣ್ಣಾಮಲೈ ಆದೇಶ ಹೊರಡಿಸಿದ್ದಾರೆ.

ಗಿರಿನಗರ ಠಾಣೆಯ ಪೇದೆ ಸುದರ್ಶನ್ ಆಸ್ಕಿನ್ ಡೆಂಟಲ್ ಡಾಕ್ಟರ್ ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪೇದೆ ವಿರುದ್ಧ ದೂರು ದಾಖಲಿಸಿದ್ದರು. ಈಗ ಕಿರುಕುಳ ನೀಡುತ್ತಿದ್ದ ಪೇದೆಯನ್ನು ಕೆಲಸದಿಂದ ಅಮಾನತು ಮಾಡುವಂತೆ ಅಣ್ಣಾಮಲೈ ಅವರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ:  ಅಣ್ಣಾಮಲೈ ಅಧಿಕಾರ ಸ್ವೀಕಾರ- ನಾನು ಈಗ ಮಗು ಆಗಿದ್ದೀನಿ ಎಂದ್ರು ಡಿಸಿಪಿ

 

ಏನಿದು ಪ್ರಕರಣ?
ಪೇದೆ ಸುದರ್ಶನ್ ಆಸ್ಕಿನ್ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ನೀಡುತ್ತಿರುವುದಾಗಿ ವೈದ್ಯೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2013ರಲ್ಲಿ ಸುದರ್ಶನ್ ಹಲ್ಲಿನ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ನನ್ನ ಫೋನ್ ನಂಬರ್ ಇಟ್ಟುಕೊಂಡು ಚಿಕಿತ್ಸೆ ನೆಪ ಹೇಳಿಕೊಂಡು ಮಾತನಾಡುತ್ತಿದ್ದನು. ನಾನು ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಬಳಿಕ ಅವನು ನೇರವಾಗಿ ಕ್ಲಿನಿಕ್ ಗೆ ಬಂದು ನಾನು ಏನು ತೊಂದರೆ ಕೊಡುವುದಿಲ್ಲ ನನ್ನ ಬಳಿ ಮಾತನಾಡು ಎಂದು ಹೇಳುತ್ತಿದ್ದನು.

police station gnanabharathi

ಮನೆ ಬದಲಾಯಿಸಿದರೂ ಫೋನ್ ಮಾಡುವುದನ್ನು ಬಿಡಲಿಲ್ಲ. ಹಿಂಬಾಲಿಸುಕೊಂಡು ಮಾತನಾಡುತ್ತಿದ್ದನು. ಒಂದೇ ವೇಳೆ ನಾನು ಆತನ ಬಳಿ ಮಾತನಾಡಲು ನಿರಾಕರಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದನು ಎಂದು ಸಂತ್ರಸ್ತೆ ವೈದ್ಯೆ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಜ್ಞಾನ ಭಾರತಿ ಠಾಣೆಯಲ್ಲಿ ಸೆಕ್ಷನ್ 354, 506 ಆಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಮಾಡಿ ಎಸ್.ಪಿ ಅಣ್ಣಾಮಲೈ ಅವರು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.

dcp annamalai

ಸೋಮವಾರ ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಅಣ್ಣಾಮಲೈ ಅವರು ಅಧಿಕಾರ ಸ್ವೀಕಾರ ಮಾಡಿದ್ದರು. ಸೌತ್ ಎಂಡ್ ಸರ್ಕಲ್ ನಲ್ಲಿರುವ ಡಿಸಿಪಿ ಕಚೇರಿಯಲ್ಲಿ ಹಿಂದಿನ ಡಿಸಿಪಿ ಡಾ ಶರಣಪ್ಪ ಶರಣಪ್ಪರಿಂದ ಅಣ್ಣಾಮಲೈ ಅಧಿಕಾರ ಸ್ವೀಕಾರ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *