ಬೆಂಗಳೂರು: ಶಾಲಾ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದ ಕಾಮುಕನಿಗೆ ಬೆಳ್ಳಂಬೆಳಗ್ಗೆ ಸ್ಥಳೀಯರು ಮತ್ತು ಪೋಷಕರು ಧರ್ಮದೇಟು ನೀಡಿದ್ದಾರೆ.
ಲಗ್ಗೆರೆಯ ಪಿಸಿ ನಗರದಲ್ಲಿ ಈ ಘಟನೆ ನಡೆದಿದ್ದು, ನವೀನ್ (26) ಥಳಿತಕ್ಕೊಳಗಾದ ರೋಡ್ ರೋಮಿಯೊ. ನವೀನ್ 9ನೇ ತರಗತಿ ವಿದ್ಯಾರ್ಥಿನಿಯ ಹಿಂದೆ ಹಲವು ದಿನಗಳಿಂದ ಬೆನ್ನುಬಿದ್ದಿದ್ದನು. ಈತ ಬಾಲಕಿಗೆ ಮೊಬೈಲ್ ಕೊಡಿಸುವುದಾಗಿ ಆಮಿಷ ತೋರಿಸಿ ಬಲೆ ಬೀಸಿದ್ದನು. ಶಾಲೆಗೆ ಹೋಗುವಾಗ ಬರುವಾಗ ಪ್ರತಿದಿನ ಕಾಡುತ್ತಿದ್ದನು.
ಅಷ್ಟೇ ಅಲ್ಲದೇ ಬಾಲಾಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದನು. ಇಂದು ಕಾಮುಕ ನವೀನ್ ಬಾಲಕಿಯ ಮನೆ ಬಳಿಯೇ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಲೈಂಗಿಕ ದೌರ್ಜನ್ಯ ಎಸಗುವಾಗ ಬಾಲಕಿ ಪೋಷಕರಿಗೆ ಕಾಮುಕ ಸಿಕ್ಕಿಹಾಕಿಕೊಂಡಿದ್ದಾನೆ. ಬಾಲಕಿ ಪೋಷಕರು ಹಾಗೂ ಸ್ಥಳೀಯರು ಕಾಮುಕನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.
ಆರೋಪಿ ನವೀನ್ ತಪ್ಪಿಸಿಕೊಂಡು ಹೋಗಬಾರದೆಂದು ಆತನನ್ನು ಹಿಡಿದು ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv