ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ತಮ್ಮ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಚಿತ್ರೋದ್ಯಮ ಮತ್ತು ಫ್ಯಾಶನ್ ಲೋಕದಲ್ಲಿ ಲೈಂಗಿಕ ದೌರ್ಜನ್ಯ ಎನ್ನುವುದು ಕಾಮನ್ ಅನ್ನುವಂತಾಗಿದೆ. ಅದರ ವಿರುದ್ಧ ನಾನು ಧ್ವನಿ ಎತ್ತಿದಾಗ ನನಗೆ ಚಿತ್ರೋದ್ಯಮದಿಂದಲೇ ಬಹಿಷ್ಕಾರ ಹಾಕಲಾಯಿತು ಎಂದಿದ್ದಾರೆ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?
ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾದ ಸೈಶಾ ಶಿಂಧು ತಮಗಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡರು. ‘ನಾನು ಫ್ಯಾಶನ್ ಲೋಕದಲ್ಲಿ ಕೆಲಸ ಮಾಡುವಾಗ ಟಾಪ್ ಡಿಸೈನರ್ ಒಬ್ಬರು ನನ್ನನ್ನು ಹೋಟೆಲ್ ಗೆ ಕರೆದುಕೊಂಡು ಹೋದರು. ಅವರ ನೋವುಗಳನ್ನು ಮತ್ತು ಅವರ ಖಾಸಗಿ ಜೀವನದಲ್ಲಿ ನಡೆದ ಘಟನೆಯನ್ನು ಹೇಳಿಕೊಂಡರು. ನಾನೂ ಅವರ ನೋವಿಗೆ ಮರುಗಿದೆ. ಅದನ್ನೇ ಅವರು ದುರಪಯೋಗ ಪಡೆಸಿಕೊಂಡು ದೌರ್ಜನ್ಯ ಎಸೆಗಿದರು. ಅದನ್ನು ನಾನು ವಿರೋಧಿಸಿದ್ದಕ್ಕೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು ಎಂದು ನೋವು ಹೇಳಿಕೊಂಡರು. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ
ಈ ಮಾತಿಗೆ ಪ್ರತ್ಯುತ್ತರವಾಗಿ ಮಾತನಾಡಿದ ಕಂಗನಾ, ‘ಇಂತಹ ಅನೇಕ ಘಟನೆಗಳನ್ನು ನಾನು ಕೇಳಿದ್ದೇನೆ. ಅವುಗಳನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ಮೀಟೂ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ನಾನು ನಿಂತುಕೊಂಡೆ. ಸಿನಿಮಾ ರಂಗ ನನಗೆ ವಿಪರೀತ ಕಾಟ ಕೊಟ್ಟಿತು. ಅದಕ್ಕೆ ನಾನು ಕೇರ್ ಮಾಡಲಿಲ್ಲ. ಇದರ ವಿರುದ್ಧ ಎಲ್ಲರೂ ನಿಂತುಕೊಳ್ಳಬೇಕು. ಆಗ ಕಡಿಮೆ ಆಗಬಹುದು ಎಂದು ಸೈಶಾಗೆ ಕಂಗನಾ ಸಮಾಧಾನ ಹೇಳಿದರು.