ಬಳ್ಳಾರಿ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವಿವಾದ ಒಂದಲ್ಲ ಎರಡಲ್ಲ. ಈ ಬಾರಿ ಮಗನ ಚಿಕಿತ್ಸೆಗೆ ಬಂದ ಮಹಿಳೆಯೊಬ್ಬರನ್ನು ಆಸ್ಪತ್ರೆಯ ವೈದ್ಯ ಮಂಚಕ್ಕೆ ಕರೆದಿದ್ದಾನೆ.
ಸೋಮಣ್ಣ ಎಂಬವನೇ ಆಸ್ಪತ್ರೆಗೆ ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ವೈದ್ಯ. ಸೋಮಣ್ಣ ವಿಮ್ಸ್ ಆಸ್ಪತ್ರೆಯಲ್ಲಿ ಇಎನ್‍ಟಿ ವಿಭಾಗದ ವೈದ್ಯನಾಗಿ ಕೆಲಸ ಮಾಡಿಕೊಂಡಿದ್ದಾನೆ. ಮಗನ ಅಂಗವೈಕಲ್ಯ ದೃಢೀಕರಣ ಪತ್ರಕ್ಕಾಗಿ ಬಂದ ಮಹಿಳೆಗೆ ವೈದ್ಯ ಸೋಮಣ್ಣ ಲೈಂಗಿಕ ಕಿರುಕುಳ ನೀಡಿದ್ದಾನೆ.
Advertisement
Advertisement
ನನ್ನ ಮಗನ ಅಂಗವೈಕಲ್ಯ ದೃಢೀಕರಣ ಪತ್ರಕ್ಕಾಗಿ ನಾನು ಆಸ್ಪತ್ರೆಗೆ ಆಗಮಿಸಿದ್ದೆ, ಆದರೆ ವೈದ್ಯ ಸೋಮಣ್ಣ ನನ್ನ ಜೊತೆ ಸಹಕರಿಸಿದರೆ ನಿನ್ನ ಮಗನಿಗೆ ಯಾವುದೇ ಪರೀಕ್ಷೆ ನಡೆಸದೇ ಅಂಗವೈಕಲ್ಯ ಪ್ರಮಾಣ ನೀಡುತ್ತೇನೆ ಎಂದು ಹೇಳಿ, ಈ ಸಂದರ್ಭದಲ್ಲಿ ಮಹಿಳೆಯ ಸೀರೆಗೆ ಕೈ ಹಾಕಿದನು ಎಂದು ಮಹಿಳೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ನೇರವಾಗಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದಾರೆ.
Advertisement
ದೂರು ದಾಖಲಾಗುತ್ತಿದ್ದಂತೆ ವೈದ್ಯ ಸೋಮಣ್ಣ ನಾಪತ್ತೆಯಾಗಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ಸೋಮಣ್ಣನ ಪತ್ತೆಗಾಗಿ ಬಲೆ ಬೀಸಿದ್ದಾರೆ.
Advertisement