ಮಂಗಳೂರು: ಸಚಿವ ರಮಾನಾಥ ರೈ ಆಪ್ತ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಗದೀಶ ಕೊಯಿಲ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ಮುಖಂಡ ಪುರುಷೋತ್ತಮ ಕೊಯಿಲ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅದಕ್ಕೆ ಜಗದೀಶ ಕೊಯಿಲ ಸಹಾಯ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.
Advertisement
ದೂರಿನಲ್ಲಿ ಏನಿದೆ?
ಪುರುಷೋತ್ತಮ ಕೊಯಿಲ ಅವರ ನಾಟಕದಲ್ಲಿ ನಾನು ಅಭಿನಯಿಸುತ್ತಿದ್ದೆ. ಈ ಸಂದರ್ಭದಲ್ಲಿ ಪುರುಷೋತ್ತಮ ಕೊಯಿಲ ಪರಿಚಯವಾಗಿದ್ದು, ಒಂದು ದಿನ ನಾಟಕ ಮುಗಿದ ಮೇಲೆ ಆತನ ತನ್ನ ಮನೆಯಲ್ಲಿಯೇ ಎಲ್ಲರನ್ನು ಉಳಿಸಿಕೊಂಡಿದ್ದನು. ನಾನು ಒಂದು ರೂಮಿನಲ್ಲಿ ಮಲಗಿದ್ದೆ. ಆಗ ಕತ್ತಲೆಯಲ್ಲಿ ರೂಮಿಗೆ ಬಂದು ನನ್ನ ಜೊತೆ ಮಲಗಿ ಅಸಭ್ಯವಾಗಿ ಫೋಟೋ ತೆಗೆದುಕೊಂಡಿದ್ದಾನೆ.
Advertisement
Advertisement
ಈ ಬಗ್ಗೆ ಕೇಳಿದಾಗ ನನ್ನ ಮದುವೆಯಾಗುವುದಾಗಿ ನಂಬಿಸಿದ್ದನು. ನಂತರ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಮಾರ್ಚ್ 4 ರಂದು ಮದುವೆಗೆ ದಿನಾಂಕ ಗೊತ್ತುಪಡಿಸಿದ್ದನು. ಆದರೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಮದುವೆಗೆ ನಿರಾಕರಿಸಿದ್ದಾನೆ. ನಾನು ಈ ಬಗ್ಗೆ ಪ್ರಶ್ನಸಿದ್ದಕ್ಕೆ ಆತನ ಸ್ನೇಹಿತರಾದ ಜಗದೀಶ ಕೊಯಿಲ ಮತ್ತು ಪ್ರವೀಣ್ ನನಗೆ ಅಸಭ್ಯವಾಗಿ ಬೈದಿದ್ದಾನೆ. ಅಷ್ಟೇ ಅಲ್ಲದೇ ನನ್ನ ವಿರುದ್ಧವೇ ಅಶ್ಲೀಲವಾಗಿ ನಿಂದಿಸಿ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟು ಮಾನ ಹರಾಜು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರೆ.
Advertisement
ಯುವತಿ ವಂಚನೆ ಮಾಡಿದ ಪುರುಷೋತ್ತಮ ಕೊಯಲಿ ಮತ್ತು ಆತನಿಗೆ ಸಹಕರಿಸಿದ್ದ ಸಚಿವ ರಮಾನಾಥ ರೈಯವರ ಆಪ್ತ ಜಗದೀಶ ಕೊಯಿಲ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಮೊದಲಿಗೆ ಸಚಿವ ರಮಾನಾಥ ರೈ ಕಡೆಯವರ ಒತ್ತಡದಿಂದಾಗಿ ಬಂಟ್ವಾಳ ಪೊಲೀಸರು ಕೇಸು ದಾಖಲಿಸಿಕೊಳ್ಳಲು ಹಿಂಜರಿಕೆ ತೋರಿದ್ದರು.
ಕೊನೆಗೆ ಯುವತಿಯ ಒತ್ತಾಯಕ್ಕೆ ಮಣಿದು ಪೊಲೀಸರು ಜಗದೀಶ್ ಕೊಯಿಲ, ಪುರುಷೋತ್ತಮ ಕೊಯಿಲ ಮತ್ತು ಪ್ರವೀಣ್ ವಿರುದ್ಧ ಎಫ್‍ಐಆರ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಜಗದೀಶ ಕೊಯಿಲ ಸೇರಿದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.