ಕ್ರಿಕೆಟ್ ಕೋಚ್‍ನಿಂದ ಬಾಲಕನಿಗೆ ಲೈಂಗಿಕ ಕಿರುಕುಳ – ಅರ್ಧಗಂಟೆಯಲ್ಲಿ ಆರೋಪಿ ಜೈಲು ಪಾಲು

Public TV
1 Min Read
RAPE ARREST 1

ಬೆಂಗಳೂರು: 13 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕ್ರಿಕೆಟ್ ಕೋಚ್ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಗರದ ಯಲಹಂಕದಲ್ಲಿ ನಡೆದಿದೆ.

ಆರೋಪಿ ಕ್ರಿಕೆಟ್ ಕೋಚ್ ನನ್ನು ನಾಸೀರ್ ಎಂದು ಗುರುತಿಸಿದ್ದು, ಇದೀಗ ಈತನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. 3 ದಿನಗಳ ಹಿಂದೆ ಕೋಚ್ ನಾಸೀರ್ ಬಾಲಕ ತರಬೇತಿ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ಜಿಕೆವಿಕೆ ಆವರಣದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.

rape arrest 1

ಆರೋಪಿ ಪೊದೆಯೊಂದರ ಬಳಿ ತಬ್ಬಿಕೊಳ್ಳಲು ಮುಂದಾಗಿ ಬಾಲಕನ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ. ನಂತರ ಕೋಚ್‍ನಿಂದ ತಪ್ಪಿಸಿಕೊಂಡ ಬಾಲಕ ಭಯದಿಂದ ಮನೆಗೆ ಹೋಗಿದ್ದಾನೆ. ಮನೆಯಲ್ಲಿ ರಾತ್ರಿ ಊಟಕ್ಕೂ ಬರಲಿಲ್ಲ. ಇದರಿಂದ ಪೋಷಕರು ಮಗನನ್ನು ಕರೆದು ವಿಚಾರಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಅರ್ಧ ಗಂಟೆಯಲ್ಲಿ ಆರೋಪಿ ನಾಸೀರ್‍ನನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಿ ಜೈಲಿಗಟ್ಟಿದ್ದಾರೆ.

batsman

rape arrest 2

Share This Article
Leave a Comment

Leave a Reply

Your email address will not be published. Required fields are marked *