ತುಮಕೂರು: ನಿನ್ನೆ ತಾನೇ ವಿಶ್ವ ಮಹಿಳಾ ದಿನಾಚರಣೆ ಆಚರಿಸಿದೆವು ‘ಯತ್ರ ನಾರಿಯಂತು ಪೂಜ್ಯಂತೆ ರಮಂತೆ ತತ್ರ ದೇವತಾ ಎಂದು ಹಾಡಿ ಹೊಗಳಿದೆವು. ಈ ಸಂಭ್ರಮದಲ್ಲಿರಬೇಕಾದರೆ ಜಿಲ್ಲೆಯಿಂದ ಒಂದು ಆಘಾತಕಾರಿ ಸುದ್ದಿ ಕೇಳಿಬಂದಿದೆ. ಚರ್ಚ್‍ನ ಸಭಾಪಾಲನಾ ಸದಸ್ಯನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಪಾತಕ್ಕೊಸಳಗಾದ ಯುವತಿಯೊಬ್ಬರು ಸಾವನಪ್ಪಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Advertisement
ಶಿರಾ ಗೇಟ್‍ನ ಹೌಸಿಂಗ್ ಬೋರ್ಡ್ ನಿವಾಸಿ ಗ್ರೇಸ್ ಪ್ರೀರ್ತನಾ ಗರ್ಭಪಾತಕ್ಕೊಳಗಾಗಿ ಸಾವನಪ್ಪಿದ್ದ ಯುವತಿ. ಶಿರಾಗೇಟ್ ಬಳಿ ಇರುವ ಸಿ.ಎಸ್.ಐ ವೆಸ್ಲಿ ಚರ್ಚ್‍ನ ಸಭಾಪಾಲನಾ ಸದಸ್ಯ ರಾಜೇಂದ್ರಕುಮಾರ್ ಎಂಬಾತನಿಂದ ಯುವತಿಯು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದರು. ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅವರ ಕುಟುಂಬ ಲಾಕ್ ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಅವನು, ಯುವತಿಯೊಂದಿಗೆ ಸಲಿಗೆ ಬೆಳೆಸಿದ್ದಾನೆ. ಅವರ ಜೊತೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಅವರಿಗೆ ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ್ದಾನೆ. ಈ ವೇಳೆ ಅಧಿಕ ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಮಾನತೆಯ ಸಂದೇಶದೊಂದಿಗೆ ವಿದ್ಯಾರ್ಥಿನಿಯರಿಂದ ಬೈಕ್ ರ‍್ಯಾಲಿ
Advertisement
Advertisement
ನವೆಂಬರ್ 8 ರಂದು ಯುವತಿ ಗ್ರೇಸ್ ಪ್ರೀರ್ತನಾ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ವಿಚಾರ ಎಲ್ಲಿಯೂ ಬಹಿರಂಗಪಡಿಸದಂತೆ ಯುವತಿ ತಾಯಿ ಸಂತೋಷ್ ಸ್ಟೆಲ್ಲಾಗೆ ಪಾಸ್ಟರ್‌ನು ಹಣದ ಆಮಿಷದ ಜೊತೆಗೆ ಬೆದರಿಕೆಯನ್ನೂ ಒಡ್ಡಿದ್ದಾನೆ. ಆದರೆ ತಡವಾಗಿ ಮಂಗಳವಾರ ಯುವತಿ ತಾಯಿ ತುಮಕೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಎಫ್‍ಐಆರ್ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ: ಡೀಮ್ಡ್ ಅಧ್ಯಕ್ಷ