ಬೆಳಗಾವಿ: ಇಲ್ಲಿನ ಗಾಲ್ಫ್ ಮೈದಾನದಲ್ಲಿ ಅವಿತುಕೊಂಡಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು `ಲೈಂಗಿಕ ಆಕರ್ಷಣೆ’ ತಂತ್ರ ಅನುಸರಿಸುತ್ತಿದ್ದಾರೆ. ಆನೆ ಬಳಕೆಯ ಜೊತೆಗೆ ಲೈಂಗಿಕ ಆಕರ್ಷಣೆ ತಂತ್ರದ ಮೂಲಕ ಚಿರತೆ ಸೆರೆಹಿಡಿಯುವ ನೂತನ ಪ್ರಯತ್ನ ಮಾಡಲಾಗಿದೆ.
Advertisement
ಕಳೆದ ಮೂರು ದಿನಗಳಿಂದ ಅರ್ಜುನ ಹಾಗೂ ಆಲೆ ಆನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಂತೆಯೇ ನಿನ್ನೆ ಸಂಜೆ ಕಣ್ಣ ಮುಂದೆ, ಕೂಗಳತೆ ಅಂತರದಲ್ಲೇ ಓಡಾಡಿದ ಚಿರತೆ ಯಾಮಾರಿಸಿ ಕಣ್ಮರೆಯಾಗಿದೆ. ಇದನ್ನೂ ಓದಿ: ನಾಳೆ ಸುಮಲತಾ ಅಂಬರೀಶ್ ಹುಟ್ಟುಹಬ್ಬ: ತಾಯಿಯ ಬರ್ತ್‌ಡೇಗೆ ಅಭಿಷೇಕ್ ಕೊಡ್ತಿರೋ ಗಿಫ್ಟ್ ಏನು?
Advertisement
ಈಗಾಗಲೇ 8 ಕಡೆ ಬೋನುಗಳನ್ನು ಇಡಲಾಗಿದ್ದು ಅಲ್ಲಿ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ ಮಾಡಲಾಗಿದೆ. ನಗರ ಸಮೀಪದ ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿನ ಎರಡು ಹೆಣ್ಣು ಚಿರತೆಗಳ ಮೂತ್ರ ತಂದು ಸಿಂಪಡಿಸಲಾಗಿದೆ. ಅದರ ವಾಸನೆಗೆ ಆಕರ್ಷಿತವಾಗಿ ಚಿರತೆ ಇತ್ತ ಬರುವ ಸಾಧ್ಯತೆ ಇದೆ.
Advertisement
Advertisement
8 ಟ್ರಾ÷್ಯಂಕುಲೈಸರ್ ಗನ್‌ಗಳನ್ನು ಬಳಕೆ ಮಾಡಿಕೊಳ್ಳಲಿದ್ದು, ಇನ್ನೂ 4 ಟ್ರಾಂಕುಲೈಸರ್ ಗನ್ ತರಿಸಲಾಗುತ್ತಿದೆ. 2 ಕಿಮಿ ವ್ಯಾಪ್ತಿಯ ಹಂದಿ ಹಿಡಿಯುವ ಬಲೆ ಬಳಕೆ ಮಾಡಲಾಗುತ್ತಿದೆ. ಚಿರತೆ ಸೆರೆಗೆ ಇಂದೂ ಸಹ ಯಥಾಸ್ಥಿತಿ ಶೋಧಕಾರ್ಯ ಮುಂದುವರಿಯಲಿದೆ ಎಂದು ಎಸಿಎಫ್ ಮಲ್ಲಿನಾಥ ಕುಸನಾಳ ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಪತ್ತೆ ಮಾಡಲು ಚಿರತೆಗೂ ಬಂತು ಆಧಾರ್ ಕಾರ್ಡ್
ಬೆಳಗಾವಿಯಲ್ಲಿ ಚಿರತೆ ಸೆರೆಗೆ `ಆಪರೇಷನ್ ಹನಿಟ್ರ್ಯಾಪ್’ ಶುರು ಮಾಡಿದ್ದು, ಬೋನುಗಳಿಗೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ ಮಾಡಲಾಗಿದೆ. ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿನ ಎರಡು ಹೆಣ್ಣು ಚಿರತೆಗಳ ಯೂರಿನ್ ತಂದು ಸ್ಪ್ರೇ ಮಾಡಲಾಗಿದೆ ಎಂದು ಮಲ್ಲಿನಾಥ ಕುಸನಾಳ ಹೇಳಿದ್ದಾರೆ.