ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್‌- ಸೂರಜ್‌ ರೇವಣ್ಣಗೆ ನ್ಯಾಯಾಂಗ ಬಂಧನ

Public TV
1 Min Read
SURAJ REVANNA 1

ಬೆಂಗಳೂರು: ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧನಕ್ಕೆ ಒಳಗಾದ ರೇವಣ್ಣ ಅವರ ಹಿರಿಯ ಪುತ್ರ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಅವರನ್ನು ಕೋರ್ಟ್‌ (Court) 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody)  ಒಪ್ಪಿಸಿ ಆದೇಶಿಸಿದೆ.

ಇಂದು ಹಾಸನ (Hassana) ಹಿಮ್ಸ್‌ನಲ್ಲಿ ಮೆಡಿಕಲ್‌ ಟೆಸ್ಟ್‌ಗೆ (Medical Test) ಒಳಪಡಿಸಿದ ನಂತರ ಸೂರಜ್‌ ರೇವಣ್ಣರನ್ನು ಬೆಂಗಳೂರಿನ (Bengaluru) ಕೋರಮಂಗಲದಲ್ಲಿರುವ 42ನೇ ಎಸಿಎಂಎಂ ನ್ಯಾಯಾಧೀಶರಾದ ಶಿವಕುಮಾರ್ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಸೂರಜ್‌ ರೇವಣ್ಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಪ್ರಕಟಿಸಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸಿಐಡಿಗೆ (CID) ವಹಿಸಿ ಆದೇಶಿಸಿದೆ. ಪ್ರಕರಣ ಇನ್ನೂ ಅಧಿಕೃತವಾಗಿ ಸಿಐಡಿಗೆ ವರ್ಗಾವಣೆ ಆಗಿಲ್ಲ. ಹೀಗಾಗಿ ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸೋಮವಾರ ಬಾಡಿವಾರೆಂಟ್ ಮೇಲೆ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಸಂತ್ರಸ್ತನ ವಿರುದ್ದ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಸೂರಜ್ ರೇವಣ್ಣ ಶನಿವಾರ ಸಂಜೆ ಹಾಸನದ ಸೆನ್ ಠಾಣೆಗೆ ತೆರಳಿದ್ದರು. ಈ ವೇಳೆ ಸೂರಜ್ ರೇವಣ್ಣರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು ಮುಂಜಾನೆಯವರೆಗೂ ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಬೆಳಗ್ಗೆ ಸೂರಜ್‌ರನ್ನು ಅಧಿಕೃತವಾಗಿ ಬಂಧಿಸಿದರು.

ಲೈಂಗಿಕ ದೌರ್ಜನ್ಯಕ್ಕೆಒಳಪಟ್ಟಿದ್ದಾರೆ ಎನ್ನಲಾದ ಸಂತ್ರಸ್ತನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

 

Share This Article