ಬೆಂಗಳೂರು: ಎಂಎಲ್‌ಸಿ ಸೂರಜ್ ರೇವಣ್ಣ (MLC Suraj Revanna) ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ತೀವ್ರಗೊಂಡಿದೆ. ಯುವಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸ್ತಿರುವ ಸೂರಜ್ ರೇವಣ್ಣರನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ (CID Custody) ನೀಡಿ ಆದೇಶ ಹೊರಡಿಸಿದೆ.
ಈ ಬೆನ್ನಲ್ಲೇ ನ್ಯಾಯಾಂಗ ಬಂಧನದಲ್ಲಿದ್ದ ಸೂರಜ್‌ರನ್ನು ಎಂಟು ದಿನದ ಮಟ್ಟಿಗೆ ಸಿಐಡಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಒಂದೆರಡು ದಿನದಲ್ಲಿ ಸೂರಜ್‌ರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಹೊಳೆನರಸೀಪುರಕ್ಕೆ ಕರೆದೊಯ್ದು ಮಹಜರು ನಡೆಸುವ ಸಾಧ್ಯತೆಯಿದೆ.
ಈ ಮಧ್ಯೆ ಸೂರಜ್ ವಿರುದ್ಧದ ಅಸಹಜ ಪ್ರಕರಣಕ್ಕೆ ಟ್ವಿಸ್ಟ್ ಸಿಗುವಂತೆ ಕಾಣ್ತಿದೆ. ಸೂರಜ್ ಪರವಾಗಿ ದೂರು ಕೊಟ್ಟಿದ್ದ ವ್ಯಕ್ತಿ ಇದೀಗ ನಾಪತ್ತೆಯಾಗಿದ್ದಾನೆ. ಫೋನ್ ಸ್ವಿಚ್ ಆಫ್ ಆಗಿದೆ. ದೂರುದಾರನ ನಡೆ ಅನುಮಾನ ಮೂಡಿಸಿದೆ. ಸೂರಜ್ ಜೊತೆಯಲ್ಲಿ ನಂಬಿಕಸ್ತನಾಗಿ ಇದ್ದುಕೊಂಡೇ ಟ್ರ್ಯಾಪ್ ಮಾಡಿಸಿದ್ರಾ ಎಂಬ ಪ್ರಶ್ನೆಗಳು ಎದ್ದಿವೆ.
ಇದಕ್ಕೆ ವ್ಯತಿರಿಕ್ತ ಬೆಳವಣಿಗೆಯೂ ನಡೆದಿದೆ. ತಮ್ಮ ವಿರುದ್ಧ ದೂರು ಕೊಟ್ಟಿದ್ದ ಸೂರಜ್ ಆಪ್ತನ ವಿರುದ್ಧ ಸಂತ್ರಸ್ತ ಕೇಸ್ ಫೈಲ್ ಮಾಡಿದ್ದಾನೆ. ಸೂರಜ್ ಕೃತ್ಯದ ಬಾಯಿಬಿಟ್ರೆ ನಿನ್ನನ್ನು ಮುಗಿಸ್ತಾರೆ ಎಂದು ಸೂರಜ್ ಆಪ್ತ ಬೆದರಿಕೆ ಹಾಕಿದ್ದ. ಮನೆಗೆ ಹೋಗಲು ಬಿಡದೇ ಲಾಡ್ಜ್‌ನಲ್ಲಿ ಕೂಡಿಹಾಕಿದ್ದ. ಆತನ ಮೇಲೆ ಕ್ರಮ ಆಗಬೇಕು ಎಂದು ಸಂತ್ರಸ್ತ ದೂರಿದ್ದಾನೆ. ಇದನ್ನೂ ಓದಿ: ಇನ್ನು ಮುಂದೆ ಅಂಗನವಾಡಿ ಕೇಂದ್ರಗಳಲ್ಲೇ LKG, UKG – ಮಾಂಟೆಸ್ಸರಿಗಳಾಗಿ ಪರಿವರ್ತನೆ
ಸೂರಜ್ ಪರ ವಾದ ಏನು?
ಕಿರುಕುಳ ನೀಡುವ ಉದ್ದೇಶ ಹೊಂದಲಾಗಿದೆ. ಎರಡ್ಮೂರು ದಿನ ವಿಚಾರಣೆಗೆ ನೀಡಿದರೆ ಸಾಕು. ಘಟನೆ ನಡೆದ ತಕ್ಷಣ ದೂರು ನೀಡಿಲ್ಲ. ಸಂತ್ರಸ್ತ ಎನ್ನಲಾದ ವ್ಯಕ್ತಿ ಬ್ಲಾಕ್‌ಮೇಲ್ ಮಾಡಿದ್ದಾನೆ .
ಸಿಐಡಿ ಪರ ವಾದ ಏನು?
ದೂರುದಾರನಿಗೆ ಆರೋಪಿಯಿಂದ ಬೆದರಿಕೆ ಇದ್ದ ಕಾರಣ ದೂರು ನೀಡುವುದು ತಡವಾಗಿದೆ. ಘಟನೆ ಹಾಸನದಲ್ಲಿ ನಡೆದಿದ್ದು ವಿಚಾರಣೆ ಅಗತ್ಯವಿದೆ. ಸ್ಥಳ ಮಹಜರು, ವೈದ್ಯಕೀಯ ಪರೀಕ್ಷೆ ನಡೆಸಬೇಕು. ಸೂರಜ್ ವಾಟ್ಸಪ್ ಚಾಟ್ ಪರಿಶೀಲನೆ ಮಾಡಬೇಕಿದೆ. ಇದನ್ನೂ ಓದಿ: ಸ್ಫೋಟಕ ಟ್ವಿಸ್ಟ್ – ಸೂರಜ್ ರೇವಣ್ಣ ಪರ ದೂರು ನೀಡಿದ್ದ ದೂರುದಾರನೇ ನಾಪತ್ತೆ!
ಬೆದರಿಕೆ ಆರೋಪವೂ ಇರುವ ಕಾರಣ ಸಾಕ್ಷ್ಯ ಸಂಗ್ರಹ ಅತೀಮುಖ್ಯವಾಗಿದೆ. ಕೃತ್ಯ ನಡೆದ ಆರೋಪಿ ಧರಿಸಿದ್ದ ವಸ್ತ್ರ ವಾಹನ ಜಪ್ತಿ ಮಾಡಬೇಕಿದೆ. 2ನೇ ಆರೋಪಿ ವಶಕ್ಕೆ ಪಡೆದು ಮುಖಾಮುಖಿ ವಿಚಾರಣೆ ನಡೆಸಬೇಕಿದೆ.ಹೀಗಾಗಿ 14 ದಿನ ಕಸ್ಟಡಿಯ ಅಗತ್ಯವಿದೆ.
ಕೋರ್ಟ್ ಹೇಳಿದ್ದೇನು?
ಈಗಾಗಲೇ ಆರೋಪಿಯ ಸ್ವಇಚ್ಛಾ ಹೇಳಿಕೆ ಪಡೆಯಲಾಗಿದ್ದು ಆರೋಪಿ ಮನೆಯ ಸಿಸಿಟಿವಿ ದೃಶ್ಯ ಸಂಗ್ರಹಿಸಲಾಗಿದೆ. ಇಷ್ಟೆಲ್ಲಾ ಆದ ಮೇಲೆ 14 ದಿನ ಕಸ್ಟಡಿ ಅಗತ್ಯವೇನಿದೆ?. ಜುಲೈ 1ರವರೆಗೆ ಕಸ್ಟಡಿಗೆ ನೀಡಲಾಗುವುದು.