ಬೆಂಗಳೂರು: ಮಾಜಿ ಸಚಿವರೂ, ಬೀದರ್‌ನ ಔರಾದ್ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ಪ್ರಭು ಚೌಹಾಣ್ (Prabhu Chauhan) ಪುತ್ರನ ವಿರುದ್ಧ ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ (Womenʼs Commission) ದೂರು ನೀಡಿದ್ದಾರೆ.
ಪ್ರಭು ಚೌಹಾಣ್ ಅವರ ಪುತ್ರ ಪ್ರತೀಕ್ ಚೌಹಾಣ್ (Prateek Chauhan) ತನ್ನನ್ನ ಮದುವೆಯಾಗೋದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಔರಾದ್‌ನ ಹೋಕ್ರಾಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೆ, ಪೊಲೀಸರು ದೂರು ಸ್ವೀಕರಿಸಿಲ್ಲ. ಹೀಗಾಗಿ ಆಯೋಗಕ್ಕೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ, ವಿಶ್ವವಿಖ್ಯಾತ ಆರ್ಥಿಕ ತಜ್ಞ ಸಂತೋಷ್ ಲಾಡ್‌ಗೆ ಬಡ್ಡಿ ಸಮೇತ ಚುಕ್ತಾ ಮಾಡ್ತಿನಿ: ಪ್ರತಾಪ್ ಸಿಂಹ
ಲೈಂಗಿಕವಾಗಿ ಬಳಕೆ – ದೂರಿನಲ್ಲಿ ಏನಿದೆ?
ಮಹಿಳಾ ಆಯೋಗಕ್ಕೆ ಪ್ರತೀಕ್ ಚೌಹಾಣ್ ವಿರುದ್ಧ ದೂರು ಸಲ್ಲಿಕೆಯಾಗಿದೆ. ಮದುವೆ ಯಾಗೋದಾಗಿ ನಂಬಿಸಿ ಮೋಸ ಮಾಡಿದ್ದು, ಲೈಂಗಿಕವಾಗಿಯೂ ಬಳಸಿಕೊಂಡಿದ್ದಾಗಿ ಯುವತಿ ಆರೋಪಿಸಿದ್ದಾರೆ. ಮನೆಯವರೆಲ್ಲ ಸೇರಿ 2023ರ ಡಿಸೆಂಬರ್ 25ರಂದು ನಿಶ್ಚಿತಾರ್ಥ ಮಾಡಿದ್ದರು. ಎರಡೂ ಕುಟುಂಬಸ್ಥರು ಒಪ್ಪಿ ಪ್ರತೀಕ್ ನಿವಾಸದಲ್ಲೇ ನಿಶ್ಚಿತಾರ್ಥ ಮಾಡಿದ್ದರು. ಬಳಿಕ ಪ್ರತಿಕ್ ಜೊತೆ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿಕೊಟ್ಟಿದ್ದರು. ಅದರಂತೆ ಪ್ರತೀಕ್ 2025ರ ಮಾರ್ಚ್ 7, 24, 27, ಏಪ್ರಿಲ್ 8 ರಂದು ಮಹಾರಾಷ್ಟ್ರದ ಲಾತೂರ್‌ಗೆ ನನ್ನನ್ನ ಕರೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ರೆ ತಪ್ಪಿಲ್ಲ ಅಂತ ಪ್ರತೀಕ್ ಒತ್ತಾಯಿಸಿದ್ರೂ, ಅದಾದ್ಮೇಲೆ ನಾನೂ ಸಹಕರಿಸಿದೆ. ಇದನ್ನೂ ಓದಿ: ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ
ಅಲ್ಲದೇ 2024ರ ಮೇ 13ರಂದು ವಿಮಾನದಲ್ಲಿ ಶಿರಡಿಗೆ ಹೋಗಿದ್ದೆವು. ನಾಲ್ವರು ಜೊತೆಗೆ ಹೋಗಿದ್ದೆವು, ಅಲ್ಲಿ ಖಾಸಗಿ ಹೋಟೆಲ್‌ನಲ್ಲಿ ನಾನು ಪ್ರತೀಕ್ ಒಂದೇ ರೂಮಿನಲ್ಲಿ ತಂಗಿದ್ದೆವು. ಆಗಲೂ ಪ್ರತೀಕ್ ಲೈಂಗಿಕ ಸಂಪರ್ಕ ಮಾಡಿದ್ದಾನೆ. ನಂತರ ಮದುವೆಗೆ ಒತ್ತಾಯ ಮಾಡಿದ್ರೆ ಮುಂದೂಡುತ್ತಲೇ ಬಂದಿದ್ದ. ನನ್ನ ಕನ್ಯತ್ವದ ಬಗ್ಗೆಯೂ ಪ್ರಶ್ನೆ ಮಾಡಿದ್ದಾನೆ. ಈ ಬಗ್ಗೆ ಪ್ರಸಕ್ತ ಜುಲೈ 5ರಂದು ನನ್ನ ಪೋಷಕರು ಪ್ರತೀಕ್ ಮನೆಗೆ ಭೇಟಿ ಕೊಟ್ಟು ಪ್ರಶ್ನೆ ಮಾಡಿದ್ದಾರೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ನಮ್ಮನ್ನ ಬಡವರು ಅಂತ ಹೀಯಾಳಿದ್ದಾರೆ. ಈ ಬಗ್ಗೆ ಇದೇ ಜುಲೈ 6ರಂದು ಔರಾದ್‌ನ ಹೋಕ್ರಾನ್ ಠಾಣೆಗೆ ದೂರು ಕೊಡಲು ಹೋಗಿದ್ದೆವು. ಆದ್ರೆ ಅವರು ಸ್ವೀಕರಿಸಲಿಲ್ಲ. ಅವರು ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಹೀಗಾಗಿ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇವೆ. ಮಹಿಳಾ ಆಯೋಗ ಏನೋ ಕ್ರಮ ಕೈಗೊಳ್ಳುತ್ತಾರೆ ನೋಡುತ್ತೇವೆ, ನಮಗೆ ನ್ಯಾಯ ಬೇಕು ಅಂತ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದಿಢೀರ್ ಆಸ್ಪತ್ರೆಗೆ ದಾಖಲಾದ ನಟ ವಿಜಯ್ ದೇವರಕೊಂಡ