ನವದೆಹಲಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಮದುವೆ ನಂತರ ಹೆಂಡತಿಯ ಒಪ್ಪಿಗೆ ಇಲ್ಲದೇ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಅದು `ವೈವಾಹಿಕ ಅತ್ಯಾಚಾರ’ ಎಂದು ಹೇಳಲಾಗುತ್ತದೆ. ಇದು ಐಪಿಸಿ ಸೆಕ್ಷನ್ 375 ಅಡಿಯ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಕೋರ್ಟ್ ತಿಳಿಸಿದೆ.
Advertisement
ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ದ್ವಿ ಸದಸ್ಯ ಪೀಠದ ನ್ಯಾ. ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತ, 18 ಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆ ಲೈಂಗಿಕ ಸಂಬಂಧ ಹೊಂದಿದರೆ ಅದು ಅತ್ಯಾಚಾರವಾಗುತ್ತದೆ. ಪತ್ನಿ ಒಂದು ವರ್ಷದೊಳಗೆ ಪತಿಯ ವಿರುದ್ಧ ದೂರು ನೀಡಿದರೆ ಕಾನೂನು ಕ್ರಮಕೈಗೊಳ್ಳಬಹುದು ಎಂದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
Advertisement
ಆರ್ಥಿಕ ಮತ್ತು ಶೈಕ್ಷಣಿಕವಾಗಿ ನಮ್ಮ ದೇಶ ಇನ್ನೂ ಮುಂದುವರಿದಿಲ್ಲ ಹಾಗೂ ಬಾಲ್ಯ ವಿವಾಹಗಳು ಇನ್ನೂ ನಡೆಯುತ್ತಿದೆ. ಆದ್ದರಿಂದ 15 ನೇ ವಯಸ್ಸಿನಲ್ಲಿ ಲೈಂಗಿಕ ಸಂಪರ್ಕ ಹೊಂದುವುದು ಅಪರಾಧ. ಇಂತಹ ಅಪರಾಧಗಳಿಂದ ಪತಿ ಮತ್ತು ಪತ್ನಿಯನ್ನು ರಕ್ಷಣೆ ಮಾಡಬೇಕಿದೆ ಎಂದು ಪೀಠ ಆಭಿಪ್ರಾಯಪಟ್ಟಿದೆ.
Advertisement
ಈ ಹಿಂದೆ ಭಾರತೀಯ ದಂಡ ಸಂಹಿತೆ 375 ಸೆಕ್ಷನ್ ಪ್ರಕಾರ 18 ವರ್ಷದ ಒಳಗಿನ ಯುವತಿಯ ಜೊತೆ ಲೈಂಗಿಕ ಸಂಪರ್ಕ ನಡೆಸಿದರೆ ಅದು ಅತ್ಯಾಚಾರ ಎಂದು ಪರಿಗಣಿಸಲಾಗುತಿತ್ತು. ಆದರೆ 15 ವರ್ಷಕ್ಕಿಂತ ಮೇಲಿನ ಹಾಗೂ 18 ವರ್ಷದೊಳಗಿನ ಹುಡುಗಿ ಜೊತೆಗೆ ಒಪ್ಪಿತ ಲೈಂಗಿಕ ಸಂಪರ್ಕ ನಡೆಸಿದರೆ ಅದು ಅತ್ಯಾಚಾರ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಇದನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಕೆಯಾಗಿತ್ತು.