ಚೆನ್ನೈ: ಸೆಕ್ಸ್ ಮಾಡಲು ನಿರಾಕರಿಸಿದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಕ್ಕಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ನಡೆದಿದ್ದು, ಕಾರ್ತಿಕ್ ಎಂಬವನೇ ಬೆಂಕಿ ಹಚ್ಚಿದ ಪಾಪಿ ಪತಿ. ಪೋಮತಿ ಪತ್ನಿ, ನೀಲಾ(5) ಮತ್ತು ಪೂರ್ವಸನ್(6) ಮಕ್ಕಳು ಬೆಂಕಿಗಾಹುತಿಗೊಳಗಾದ ದುರ್ದೈವಿಗಳು.
ಏನಿದು ಘಟನೆ?
ಅಜ್ಗಲಪುರಂದ ಅಟ್ಟೂರ್ ನ ಸೇಲಂ ಬಳಿ ಕಾರ್ತಿಕ್ ಕುಟುಂಬವು ವಾಸವಾಗಿತ್ತು. ಪ್ರತಿನಿತ್ಯವು ಕಾರ್ತಿಕ್ ಪತ್ನಿಗೆ ಕಿರುಕುಳವನ್ನು ನೀಡುತ್ತಿದ್ದನು. ಅದೇ ರೀತಿ ಕಾರ್ತಿಕ್ ಮಂಗಳವಾರ ಮದ್ಯಸೇವನೆ ಮಾಡಿ ಮನೆಗೆ ಬಂದಿದ್ದು, ಲೈಗಿಂಕ ಕ್ರಿಯೆಯಲ್ಲಿ ತೊಡಗುವಂತೆ ಪತ್ನಿ ಪೋಮತಿಗೆ ಒತ್ತಾಯಿಸುತ್ತಾನೆ. ಆದರೆ ಪೋಮತಿ ಇದಕ್ಕೆ ನಿರಾಕರಿಸುತ್ತಾಳೆ.
ಇದರಿಂದ ಕೋಪಗೊಂಡ ಕಾರ್ತಿಕ್, ಪೋಮತಿ ಹಾಗೂ ಇಬ್ಬರು ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಇವರ ಕೂಗು ಕೇಳಿ ಸ್ಥಳೀಯರು ಓಡಿ ಬಂದು ರಕ್ಷಣೆ ಮಾಡಿ, ಆಸ್ಪತ್ರೆಗೆ ಸೇರಿಸಿದ್ದಾರೆ. ಪೋಮತಿ ಹಾಗೂ ಮಕ್ಕಳಿಗೆ ಗಂಭೀರ ಗಾಯಾಗಳಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಆದರೆ ಪೋಮತಿ ಸಾಯುವ ಮುನ್ನ ನಡೆದ ವಿಚಾರವನ್ನು ಬಿಚ್ಚಿಟ್ಟರು ಎಂದು ಪೊಲೀಸರು ತಿಳಿಸಿದರು.
ಈ ಘಟನೆ ಸಂಬಂಧಿಸಿದಂತೆ ಪೊಲೀಸರು ಕಾರ್ತಿಕ್ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ಸದ್ಯ ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv