ತಿರುವನಂತಪುರಂ: ಮಹಿಳೆಯೊಂದಿಗೆ ಸೆಕ್ಸ್ ಮಾಡಿದ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ 23 ವರ್ಷದ ಯುವಕ ಲಿನು, ತಾನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಜೊತೆಗೆ ಸೆಕ್ಸ್ ಮಾಡುವಾಗ ಅದನ್ನು ಫೇಸ್‍ಬುಕ್ ಲೈವ್‍ನಲ್ಲಿ ಹರಿಬಿಟ್ಟಿದ್ದ. ಈ ಬಗ್ಗೆ ಲಿನು ವಿರುದ್ಧ ಆ ಮಹಿಳೆ ದೂರು ನೀಡಿದ್ದು, ಶುಕ್ರವಾರದಂದು ಪೊಲೀಸರು ಲಿನುನನ್ನು ಬಂಧಿಸಿದ್ದಾರೆ.
Advertisement
ಲಿನು ಫೇಸ್‍ಬುಕ್‍ನಲ್ಲಿ ಸೆಕ್ಸ್ ವಿಡಿಯೋ ಲೈವ್ ಮಾಡಿದ ನಂತರ ವಾಟ್ಸಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದ್ರೆ ಇದು ಇಷ್ಟಕ್ಕೇ ಮುಗಿಯಲಿಲ್ಲ. ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಇಬ್ಬರೂ ಗೊತ್ತಿದ್ದೇ ಫೇಸ್‍ಬುಕ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಮಹಿಳೆ ಮಾತ್ರ ಲಿನು ಮಾಡಿದ್ದು ತನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾಳೆ. ಲಿನು ತನ್ನನ್ನು ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
Advertisement
Advertisement
ಈಗಾಗ್ಲೇ ಮುದವೆಯಾಗಿತ್ತು: ಲಿನು ವಿರುದ್ಧ ಪ್ರಕರಣ ದಾಖಲಿಸಿದ ಮಹಿಳೆಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಈ ಹಿಂದೆಯೇ ಮದುವೆಯಾಗಿದ್ದು ಒಂದು ಮಗುವೂ ಇದೆ. ಆದ್ರೆ ಆಕೆ ತನ್ನ ಗಂಡನೊಂದಿಗೆ ವಾಸಿಸುತ್ತಿಲ್ಲ. ಲಿನು ಜೊತೆಗೆ ಆಕೆಗೆ ಸುಮಾರು 6 ತಿಂಗಳಿನಿಂದ ಅಕ್ರಮ ಸಂಬಂಧವಿತ್ತು. ಲಿನು ಆಗಾಗ ಆಕೆಯ ಮನೆಗೆ ಹೋಗುತ್ತಿದ್ದ. ಕಲವೊಮ್ಮೆ ಅಲ್ಲೇ ಉಳಿದುಕೊಳ್ತಿದ್ದ. ಮಹಿಳೆಯನ್ನ ಮದುವೆಯಾಗೋದಾಗಿ ಮಾತು ಕೊಟ್ಟಿದ್ದ ಎಂದು ವರದಿಯಾಗಿದೆ.
Advertisement
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವನ್ನ ಮಹಿಳೆಯ ಒಪ್ಪಿಗೆಯಿಂದಲೇ ವಿನು ಚಿತ್ರೀಕರಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದ್ರೆ ಈಗ ಮಹಿಳೆ ಲಿನು ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾಳೆ.
ಮಹಿಳೆಯೊಂದಿಗಿನ ಹಸಿಬಿಸಿ ದೃಶ್ಯವನ್ನ ಲೈಕ್ಸ್ ಗೋಸ್ಕರ ಫೇಸ್‍ಬುಕ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ್ದಾಗಿ ಲಿನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಲಿನು ಎಲ್ಲವನ್ನೂ ವಿಡಿಯೋ ಮಾಡುತ್ತಿದ್ದಾನೆಂದು ಮಹಿಳೆಗೂ ಗೊತ್ತಿತ್ತು ಎಂದು ಹೇಳಿಕೊಂಡಿದ್ದಾನೆ ಅಂತ ಸರ್ಕಲ್ ಇನ್ಸ್ ಪೆಕ್ಟರ್ ಕೆ. ಸಾಬು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.ಮಹಿಳೆಯ ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆ ನಡೆದಿರುವಂತೆ ಕಾಣುತ್ತದೆ ಎಂದು ಪೊಲೀಸರು ಹೇಳಿದ್ದು, ಆಕೆಯ ಅತ್ಯಾಚಾರ ಆರೋಪ ನಿಲ್ಲುವ ಸಾಧ್ಯತೆಗಳಿಲ್ಲ.
ಪೊಲೀಸರು ಲಿನುವಿನ ಫೋನ್ ವಶಪಡಿಸಿಕೊಂಡಿದ್ದು, ಮಹಿಳೆಯೊಂದಿಗಿನ ಮತ್ತಷ್ಟು ಖಾಸಗಿ ವಿಡಿಯೋಗಳು ಪತ್ತೆಯಾಗಿದೆ. ಈ ಹಿಂದೆಯೂ ಅವರು ಇಂತಹ ವಿಡಿಯೋಗಳನ್ನ ಚಿತ್ರೀಕರಿಸಿದ್ದಾರೆ. ಹೀಗಾಗಿ ಆತ ಲೈವ್ ವಿಡಿಯೋ ಮಾಡಿದ್ದಕ್ಕೆ ಏನೋ ಕಾರಣವಿರಬೇಕು. ಪೊಲೀಸ್ ವಶಕ್ಕೆ ಪಡೆದ ನಂತರ ಈ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸುತ್ತೇವೆ ಎಂದು ಪೊಲಿಸರು ಹೇಳಿದ್ದಾರೆ.