ವಾಷಿಂಗ್ಟನ್: ಸಾಮಾನ್ಯವಾಗಿ ಮನೆ ಬಾಡಿಗೆ ಪಡೀಬೇಕಾದ್ರೆ ಬಾಡಿಗೆದಾರರು ಕೆಲವು ಒಪ್ಪಂದಗಳಿಗೆ ಸಹಿ ಮಾಡಿಸಿಕೊಳ್ತಾರೆ. `ಕೆಲವರು ನೋ ಪಾರ್ಟಿ, ನೋ ಸ್ಮೋಕಿಂಗ್, ನೋ ಶೌಟಿಂಗ್’ ಹೀಗೆ ಏನೇನೋ ಕಾರಣಗಳನ್ನ ನೀಡಿ, ತಮಗೂ ತೊಂದರೆಯಾದಂತೆ ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಾಲೀಕ ಮನೆ ಬಾಡಿಗೆ ನೀಡಬೇಕಾದ್ರೆ `ಲೈಂಗಿಕ ಸಂಭೋಗ- ಸೆಕ್ಸ್’ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
Advertisement
ಅಮೆರಿಕದ ನೆವಾಡಾದ ಲಾಸ್ ವೇಗಸ್‌ನಲ್ಲಿರುವ ವ್ಯಕ್ತಿಯೊಬ್ಬ ಸ್ಥಳೀಯ ಮಹಿಳೆಗೆ ಬಾಡಿಗೆ ನೀಡಲು ಮಾಲೀಕ `ಸೆಕ್ಸ್ ಒಪ್ಪಂದಕ್ಕೆ’ ದಾಖಲೆಗಳ ಮೇಲೆ ಸಹಿ ಮಾಡಿಸಿಕೊಂಡಿದ್ದಾನೆ. ಕೆಲ ದಿನಗಳ ನಂತರ ಮನೆಯ ಮಾಲೀಕನ ವಿರುದ್ಧ ಸ್ಥಳೀಯ ಫೆಡರಲ್ ನ್ಯಾಯಾಲಯಲ್ಲಿ ವಿಚಾರಣೆ ಬಂದಾಗ ದಾಖಲೆಗಳನ್ನು ನೀಡಿದ್ದು, ವಿಚಾರ ಬಹಿರಂಗಗೊಂಡಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್ ಕೇರ್
Advertisement
Advertisement
ಸಂತ್ರಸ್ತ ಮಹಿಳೆಗೆ ಮನೆ ಬಾಡಿಗೆ ಪಡೆಯುವ ಸಂದರ್ಭದಲ್ಲಿ ತನ್ನ ಮಕ್ಕಳಿಗಾಗಿ ಮನೆ ಅವಶ್ಯವಿತ್ತು. ಇದೇ ಕಾರಣದಿಂದಾಗಿ ಮನೋ ವಿಕೃತಿ ಮೆರೆದಿರುವ ಮಾಲೀಕ ಅಲನ್ ರೋಥ್‌ಸ್ಟೈನ್ ಮನೆಯ ಬಾಡಿಗೆ ಪಡೆಯುವ ಸಲುವಾಗಿ ಲೈಂಗಿಕ ಬೇಡಿಕೆಗಳಿಗೆ ಸಹಿ ಮಾಡಿಸಿರುತ್ತಾನೆ. ನಂಬಲು ಅಸಾಧ್ಯವಾದರೂ ಒಪ್ಪಂದಕ್ಕೆ ಒಳಪಟ್ಟಿರುವುದು ದಾಖಲೆಗಳಲ್ಲಿ ಸಾಬೀತಾಗಿದೆ. ಇದು ವಂಚನೆ ಹಾಗೂ ಕಿರುಕುಳಕ್ಕೆ ಸಮನಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ
Advertisement
ನ್ಯಾಯಾಲಯದ ದಾಖಲೆಗಳ ಪ್ರಕಾರ, ನವೆಂಬರ್ 2018 ರಲ್ಲಿ ಲಾಸ್ ವೇಗಸ್ ಬೌಲೆವಾರ್ಡ್ ಮತ್ತು ಸೇಂಟ್ ರೋಸ್ ಪಾರ್ಕ್ವೇಗೆ ಸಮೀಪವಿರುವ ವೆಡ್ಜ್‌ಬ್ರೂಕ್ ಸ್ಟ್ರೀಟ್‌ನಲ್ಲಿ 4 ಬೆಡ್‌ರೂಮ್ ಮನೆಯನ್ನು ಬಾಡಿಗೆಗೆ ಪಡೆಯುವ ಸಲುವಾಗಿ ಆತ ವಿಕೃತಿ ಮೆರಿದ್ದಾನೆ. ಸಂಭಾವ್ಯ ಬಾಡಿಗೆದಾರರಿಂದ ಸಹಿ ಮಾಡಿಸಿ ಬಲಿಪಶುಗಳನ್ನಾಗಿ ಮಾಡಿದ್ದಾನೆ ಎಂದು ಹೇಳಲಾಗಿದೆ.
ಸದ್ಯ ವಿಚಾರಣೆ ನಂತರ ಬಾಡಿಗೆ ಪರವಾನಗಿಗಳನ್ನು ನಿಷೇಧಿಸಲಾಗಿದ್ದು, ಈ ಹಿಂದಿನ ಹಿಡುವಳಿದಾರನಿಂದ ಮೊಕದ್ದಮೆ ಹೂಡಲ್ಪಟ್ಟಿದೆ. ಒಂದು ವೇಳೆ ನ್ಯಾಯಾಧೀಶರು ಫೇರ್ ಹೌಸಿಂಗ್ ಆಕ್ಟ್ ಅನ್ನು ಉಲ್ಲಂಘಿಸಿದ್ದಾರೆಂದು ಪರಿಗಣಿಸಿದರೆ ಕಾನೂನು ಕ್ರಮವಾಗುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.