ವಾಷಿಂಗ್ಟನ್ ಡಿಸಿ: ಸೆಕ್ಸ್ ಅಡಿಕ್ಟ್ ಆಗಿದ್ದ 30 ವರ್ಷದ ಮಹಿಳೆಯೊಬ್ಬರು ತಮ್ಮ ಜೀವನದ ಕಥೆಯನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ತಾವು ಹೇಗೆ ಆತ್ಮಹತ್ಯಗೆ ಪ್ರಯತ್ನಿಸಿದೆ ಮತ್ತು ಭವಿಷ್ಯದಲ್ಲಿ ಜೀವನ ಕಟ್ಟಿಕೊಂಡ ಬಗೆ ಹೇಗೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಅಮೆರಿಕಾದ ಟೆಕ್ಸಾಸ್ ನಿವಾಸಿ ಜೆಸ್ ಡೌನಿ ಎಂಬ ಮಹಿಳೆ ನಿಂಫೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು. ನಿಂಫೋನಿಯಾ ಮಹಿಳೆಯರಲ್ಲಿ ಕಾಡುವ ವಿಚಿತ್ರ ಕಾಯಿಲೆಯಾಗಿದ್ದು, ಯಾವಾಗಲೂ ಸೆಕ್ಸ್ ಗಾಗಿ ಹಂಬಲಿಸುತ್ತಿರುತ್ತಾರೆ. ನಿಂಫೋನಿಯಾ ಲಕ್ಷಣ ಹೊಂದಿರುವ ಮಹಿಳೆಯರಲ್ಲಿ ಸೆಕ್ಸ್ ಇಚ್ಚೆ ಅತಿರೇಕದಲ್ಲಿರುತ್ತದೆ.
Advertisement
ಜೆಸ್ ಹೇಳೋದೇನು?: ನಾನು ಐದು ವರ್ಷದವಳಿದ್ದಾಗ ಸ್ವಂತ ತಂದೆಯೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ನನ್ನ ಪೋಷಕರು ವಿಚ್ಛೇದನ ಪಡೆದಿದ್ದರಿಂದ ರಜಾ ದಿನಗಳಲ್ಲಿ ಮಾತ್ರ ತಂದೆ ಮನೆಯಲ್ಲಿರುತ್ತಿದ್ದೆ. ಅವನು ಸಹ ಸೆಕ್ಸ್ ಅಡಿಕ್ಟ್ ಆಗಿದ್ದು, ಪ್ರತಿನಿತ್ಯ ಮದ್ಯ ಸೇವನೆ ಮಾಡುತ್ತಿದ್ದನು. ತಂದೆ ನಿರಂತರವಾಗಿ ಎರಡು ವರ್ಷಗಳವರೆಗೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗುತ್ತಾ ಬಂದು, ಮುಂದೊಂದು ದಿನ ಏನು ಹೇಳದೆ ತನ್ನ ಹೀನ ಕೃತ್ಯವನ್ನು ನಿಲ್ಲಿಸಿದ್ದ.
Advertisement
Advertisement
ಸೆಕ್ಸ್ ಅಡಿಕ್ಟ್ ನಿಂದ ಬಳಲುತ್ತಿದ್ದಾಗ ಹಲವು ಬಾರಿ ಅಪರಿಚಿತ ಅಜ್ಞಾತ ಸ್ಥಳದಲ್ಲಿ ಪುರುಷರನ್ನು ಭೇಟಿ ಮಾಡುತ್ತಿದ್ದೆ. ಆದ್ರೆ ನಾನು ಯಾರೊಂದಿಗೆ ನನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿಯೂ ಸಹ ನಾನು ಅನೈತಿಕ ಚಟುವಟಿಕೆಗಳನ್ನು ತೊಡಗಿಕೊಳ್ಳುತ್ತಿದ್ದೆ. ಇದನ್ನೂ ಓದಿ: ಸಮಯವಲ್ಲದ ಸಮಯದಲ್ಲಿ ಸೆಕ್ಸ್ ಗಾಗಿ ಪೀಡಿಸುತ್ತಿದ್ದ ಪತ್ನಿಯನ್ನು ಕೊಂದೇ ಬಿಟ್ಟ!
Advertisement
ಉದ್ಯೋಗವೂ ಹೋಯ್ತು: ನಾನು ಕೆಲಸದ ವೇಳೆಯಲ್ಲಿಯೂ ಸೆಕ್ಸ್ ಫಿಲ್ಮ್ ಗಳ ವೀಕ್ಷಣೆ ಮಾಡುತ್ತಿದ್ದೆ. ಆಫೀಸ್ ನ ಕೊಠಡಿಗಳ ಕಿಟಕಿಗಳು ಗಾಜಿನಿಂದ ಮಾಡಲ್ಪಟ್ಟಿದ್ದರಿಂದ ಸೆಕ್ಸ್ ಸಿನಿಮಾಗಳನ್ನು ನೋಡುತ್ತಿರುವುದು ಎಲ್ಲ ಸಹದ್ಯೋಗಿಗಳಿಗೆ ಗೊತ್ತಿತ್ತು. ಮುಂದೊಂದು ದಿನ ಇದೇ ಕಾರಣ ನೀಡಿ ನನ್ನನ್ನು ಕೆಲಸದಿಂದ ತೆಗೆಯಲಾಯ್ತು.
ಮಾನಸಿಕ ಖಿನ್ನತೆ: ತನಗಿರುವ ಕಾಯಿಲೆಯಿಂದ ಉದ್ಯೋಗ, ಬರುತ್ತಿದ್ದ ಆದಾಯ, ಆರೋಗ್ಯ ಎಲ್ಲವು ಕಳೆದು ಹೋಗಲು ಆರಂಭಿಸಿತು. ಈ ತರಹದ ಘಟನೆಗಳಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ 2014ರಲ್ಲಿ ನಾನು ಸೂಸೈಡ್ ಚೆಕ್ ಲಿಸ್ಟ್ ರೆಡಿ ಮಾಡಲು ಮುಂದಾದೆ. ಮುಂದೆ ನನ್ನ ಸಾವಿನಿಂದ ಯಾರಿಗೂ ತೊಂದರೆ ಆಗಬಾರದೆಂದು ಆತ್ಮಹತ್ಯೆಯ ಪಟ್ಟಿ ತಯಾರಿಸಲು ಸಿದ್ಧತೆ ನಡೆಸಿದೆ. ಒಂದು ವೇಳೆ ಆತ್ಮಹತ್ಯೆ ಮಾಡಿಕೊಳ್ಳದೆ ಇದ್ದರೆ ಲೈಂಗಿಕ ಆಸಕ್ತಿ ನನ್ನನ್ನು ಮದ್ಯ ವ್ಯಸನಿ ಅಥವಾ ಡ್ರಗ್ಸ್ ಸೇವಿಸಲು ಪ್ರೇರಿಸಬಹುದೆಂಬ ವಿಚಾರಗಳು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದವು.
ಕೊನೆಗೆ ತನಗಿರುವ ಕಾಯಿಲೆಗೆ ಅಂತ್ಯ ಹಾಡಬೇಕೆಂದು ನಿರ್ಧರಿಸಿ, ಮಾನಸಿಕ ತಜ್ಞರ ಸಲಹೆ ಪಡೆಯಲು ಮುಂದಾದೆ. ಚಿಕಿತ್ಸೆಗೆ ಒಳಗಾದ ಬಳಿಕ ಸೆಕ್ಸ್ ತೊರೆದು ಸುದೀರ್ಘ ಎರಡು ವರ್ಷಗಳ ಕಾಲ ಪ್ರವಾಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಸದ್ಯ ಜೆಸ್ ಗುಣಮುಖರಾಗಿದ್ದು, ತನ್ನಂತೆಯೇ ನಿಂಫೋನಿಯಾ ಕಾಯಿಲೆಯಿಂದ ಬಳಲುವ ಮಹಿಳೆಯರಿಗೆ ಸಲಹೆ ಮತ್ತು ಸೂಕ್ತ ಚಿಕಿತ್ಸೆಯ ಸಹಾಯ ಮಾಡುತ್ತಿದ್ದಾರೆ.