ಧಾರವಾಡ: ಧಾರವಾಡ ಜಿಲ್ಲೆ ಸೇರಿದಂತೆ ಗದಗ, ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ, ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಶೀತಗಾಳಿಯೊಂದಿಗೆ ಮೈ ಕೊರೆಯುವ ಚಳಿ ಇರಲಿದೆ. ಇದು ಮಾನವರು ಹಾಗೂ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಕೃಷಿ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮೈ ಕೊರೆಯುವ ಚಳಿ ಇರಲಿದೆ. ಬರುವ ಎರಡು ದಿನಗಳಲ್ಲಿ ಇನ್ನೂ ಹೆಚ್ಚಿನ ಚಳಿ ಹಾಗೂ ಶೀತಗಾಳಿ ಇರಲಿದೆ. ಇದು ವಯಸ್ಸಾದವರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದರ ಜೊತೆಗೆ ಬೆಳೆ ವೈಪರಿತ್ಯವೂ ಉಂಟಾಗಲಿದೆ ಎಂದ ಹವಾಮಾನ ಇಲಾಖೆ ತಿಳಿಸಿದೆ. ಈ ಶೀತಗಾಳಿಯಿಂದ ಮನುಷ್ಯರು ತಮ್ಮನ್ನು ರಕ್ಷಿಸಿಕೊಳ್ಳಬೇಕು. ಬೆಚ್ಚಗಿನ ನೀರು, ಆಹಾರವನ್ನೇ ಸೇವಿಸಬೇಕು. ಇದರ ಜೊತೆಗೆ ಬೆಳೆಗಳನ್ನು ಸಂರಕ್ಷಿಸಲು ಹವಾಮಾನ ತಜ್ಞರು ಕೆಲವೊಂದಿಷ್ಟು ಸೂಚನೆಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ – ಬೆಂಗ್ಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ದೂರು
ಸದ್ಯ ಧಾರವಾಡ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸಾಕಷ್ಟು ಚಳಿ ಇದ್ದು, ಬರುವ ಎರಡ್ಮೂರು ದಿನಗಳಲ್ಲಿ ಮತ್ತಷ್ಟು ಮೈ ಕೊರೆಯುವ ಚಳಿ ಇರಲಿದೆ. ವಯಸ್ಸಾದವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುವುದು ಸೂಕ್ತ ಎಂದು ಕೃಷಿ ವಿವಿ ಹವಾಮಾನ ಇಲಾಖೆ ಮುಖ್ಯಸ್ಥ ಡಾ.ಎಂ.ಪಿ.ಪೋದ್ದಾರ ಹೇಳಿದ್ದಾರೆ. ಇದನ್ನೂ ಓದಿ: Explainer | ಕಾಳಿಂಗ ಸರ್ಪ ಹಿಡಿಯೋಕೆ ಅರಣ್ಯ ಇಲಾಖೆಯಿಂದಲೇ ವ್ಯವಸ್ಥೆ - ವಿಶೇಷ ತರಬೇತಿ ಅಗತ್ಯವೇ? ಉರಗ ತಜ್ಞರು ಹೇಳೋದೇನು?

